ಧರ್ಮಸ್ಥಳ ಹತ್ಯೆಗಳು: 9ನೇ ಸ್ಥಳದಲ್ಲಿ ಶೋಧ ಕಾರ್ಯ ಆರಂಭ

ಮಂಗಳೂರು: ಧರ್ಮಸ್ಥಳ  ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಮೃತದೇಹದ ಕುರುಹುಗಳ ಪತ್ತೆಗಾಗಿ ಇಂದೂ ಸಹ ಶೋಧ ಮುಂದುವರಿದಿದೆ. ಸಾಕ್ಷಿ ದೂರುದಾರ ತೋರಿಸಿದ್ದ 9ನೇ ಜಾಗದಲ್ಲಿ ವಿಶೇಷ ತನಿಖಾ ತಂಡವು ಭೂಮಿಯನ್ನು ಅಗೆಯುವ ಕಾರ್ಯವನ್ನು ಆರಂಭಿಸಿದೆ.

ಜಾಗ ಅಗೆಯುತ್ತಿರುವ ಸ್ಥಳವು ಧರ್ಮಸ್ಥಳವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಿಂದ ಕೇವಲ 10 ಮೀ ದೂರದಲ್ಲಿದೆ. ಭೂಮಿ ಅಗೆಯುವ ಹಾಗೂ ಶೋಧ ಕಾರ್ಯದ ದೃಶ್ಯಗಳು ಹೊರಗಡೆ ಕಾಣಬಾರದು ಎಂಬ ಉದ್ದೇಶದಿಂದ ಹೆದ್ದಾರಿ ಪಕ್ಕದಲ್ಲಿ ಸುಮಾರು ಉದ್ದಕ್ಕೂ ಹಸಿರು ಬಣ್ಣದ ಪರದೆ ಕಟ್ಟಲಾಗಿದೆ.

ಈ ಪ್ರಕರಣದ ಸಾಕ್ಷಿ ದೂರುದಾರ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ ಎಂಟು ಜಾಗಗಳನ್ನು ಎಸ್ಐಟಿ ಇದುವರೆಗೆ ಅಗೆಯಿಸಿದೆ. ಆತ ತೋರಿಸಿದ್ದ ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಅವಶೇಷಗಳು ಗುರುವಾರ ಪತ್ತೆಯಾಗಿದ್ದವು. ಇನ್ನುಳಿದ ಎಳು ಜಾಗಗಳಲ್ಲಿ ಮೃತದೇಹದ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಒಂಭತ್ತರಿಂದ ಹದಿಮೂರನೇ ಸ್ಥಳದವರೆಗೆ ಅತಿ ಹೆಚ್ಚು ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ದೂರುದಾರ ಹೇಳಿದ್ದು ತೀವ್ರ ಕುತೂಹಲ ಕೆರಳಿಸಿದೆ.

More articles

Latest article

Most read