ಮಗಳನ್ನು ಹುಡುಕಿ ಕೊಡಿ: ಧರ್ಮಸ್ಥಳದಲ್ಲಿ 2 ದಶಕದ ಹಿಂದೆ ನಾಪತ್ತೆಯಾದ ಪುತ್ರಿಯ ತಾಯಿ ದೂರು ದಾಖಲು

Most read

ಮಂಗಳೂರು:  2003ರಲ್ಲಿ ತಮ್ಮ ಪುತ್ರಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎಂದು  ಸುಜಾತಾ ಭಟ್ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಸುಜಾತಾ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಅವರನ್ನು ಭೇಟಿ ಮಾಡಿದ್ದರು. ಆದರೆ ಎಸ್‌ ಪಿ ಅವರು ಪ್ರಕರಣ ಈಗಿನ ಧರ್ಮಸ್ಥಳ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಅಲ್ಲಿಯೇ ದೂರು ನೀಡುವಂತೆ  ಸಲಹೆ ನೀಡಿದ್ದರು.  

ಅದರಂತೆ ಕಳೆದ ರಾತ್ರಿ 8 ಗಂಟೆಗೆಭಟ್‌ ಅವರು  ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ಸಬ್‌ ಇನ್‌ಸ್ಪೆಕ್ಟರ್ ಸಮರ್ಥ್ ಆರ್.ಗಾಣಿಗೇರ ಅವರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಸಂಜೆ ಸುಜಾತಾ ಅವರು ತಮ್ಮ ವಕೀಲ ವಕೀಲ ಮಂಜುನಾಥ್  ಅವರ ಜತೆಯಲ್ಲಿ ಎಸ್‌ ಪಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ರು. ನಂತರ ಮಾತನಾಡಿದ ಅವರು  ನನ್ನ ಮಗಳು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆಂದು ತೆರಳಿದ್ದಾಗ ಕಾಣೆಯಾಗಿದ್ದಳು. ಆಗ ನಾನು ಕೋಲ್ಕತ್ತಾದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿಂದ ಮರಳಲು ಎರಡು ದಿನಗಳಾದವು. ಇಲ್ಲಿಗೆ ಬಂದು  ಮಗಳನ್ನು ಹುಡುಕಿದಙಾಗ ಕಾಣಲಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂಉರ ನೀಡಲು ಹೋದಾಗ ಅಲ್ಲಿನ ಪೊಲೀಸರು ನಿನ್ನ ಮಗಳನ್ನು ನೀನೇ ಹುಡಿಕಿಕೊ, ಸ್ನೇಹಿತನ ಜತೆ ಹೋಗಿರಬಹುದು ಎಂದು ಬೆದರಿಕೆ ಹಾಕಿ ಕಳುಹಿಸಿದ್ದರು ಎಂದರು.

ಬೇರೆ ದಾರಿ ಕಾಣದೆ ಧರ್ಮಸ್ಥಳಕ್ಕೆ ಆಗಮಿಸಿ ಮಗಳಿಗಾಗಿ ಹುಡುಕಾಡಿ ಕುಳಿತಿದ್ದಾಗ ನಾಲ್ವರು ಅಪರಿಚಿತರು ಆಗಮಿಸಿ ನಿಮ್ಮ ಮಗಳನ್ನು ನೋಡಿದ್ದೇವೆ, ಹುಡುಕಿ ಕೊಡುತ್ತೇವೆ ಎಂದು ಕರೆದೊಯ್ದು ನನ್ನನ್ನು ಕೂಡಿ ಹಾಕಿದ್ದರು. ಮರುದಿನ ಬೆಳಿಗ್ಗೆ ಸುಮಾರು 5 ಗಂಟೆಯ ಹೊತ್ತಿಗೆ ನನ್ನನ್ನು ಹೊರಗಡೆ ಕರೆದುಕೊಂಡು ಬಂದು ಬಿಟ್ಟು ಹೋದರು. ಅಪರಿಚಿತರು ನನಗೆ ಹೊಡೆದು ಗಾಯ ಮಾಡಿದ್ದರು. ಅದರ ಕಲೆಗಳೂ ಈಗಲೂ ಕೈಗಳು ಮತ್ತು ತಲೆಯಲ್ಲಿ ಉಳಿದುಕೊಂಡಿವೆ ಎಂದು ತಲೆ ಮತ್ತು ಕೈಗಳನ್ನು ತೋರಿಸಿದರು.

ಹೊಡೆದವರು ಯಾರು ಎಂದು ತಿಳಿದಿಲ್ಲ. ಹೊಡೆದಾಹ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಮತ್ತೊಬ್ಬರು ಆಗಮಿಸಿ ಸೇರಿಸಿದ್ದಾರೆ ಎಂದು ಅನ್ನಿಸುತ್ತದೆ. ಆಗ ನಾನು ಕೋಮಾಗೆ ಹೋಗಿದ್ದೆ. ಎಚ್ಚರ ಬಂದಾಗ ಆಸ್ಪತ್ರೆಯಲ್ಲಿ ಇದ್ದೆ. ನನ್ನನ್ನು ಅಂದು ಆಸ್ಪತ್ರೆಗೆ ಸೇರಿಸಿದ ಆ ಮಹಾನುಭಾವನಿಗೆ ಕೃತಜ್ಞತೆಗಳು ಎಂದರು.

ಸಾಕ್ಷಿ ದೂರುದಾರ ಹೇಳಿದಂತೆ ಪೊಲೀಸರು ಹುಡುಕಿದಾಗ ತಲೆ ಬುರುಡೆ ಸಿಕ್ಕಿದೆ. ಅದನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಅದು ನನ್ನ ಮಗಳದ್ಧೇ ಆಗಿರಬಹುದು ಎಂಬ ಆಶಾಭಾವನೆಯೊಂದಿಗೆ ದೂರು ಸಲ್ಲಿಸಿದ್ದೇನೆ. ನನ್ನ ಮಗಳ ಅಸ್ತಿ ಸಿಕ್ಕರೆ  ಸನಾತನ ಬ್ರಾಹ್ಮಣ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಎಂದು ತಿಳಿಸಿದರು.

ನಾನು ಭಯದಿಂದ ಇದುವರೆಗೂ ದೂರು ನೀಡಲು ಮುಂದಾಗಲಿಲ್ಲ. ನನಗೆ ಯಾರ ಬೆಂಬಲವೂ ಇಲ್ಲ. ಇದ್ದ ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ಕಣ್ನೀರು ಹಾಕಿದರು.

More articles

Latest article