ಕಳೆದ ಮೂರ್ನಾಲ್ಕು ವರ್ಷಗಳಿಂದ ಇಡೀ ಪ್ರಪಂಚವನ್ನು ಕೊರೊನಾ ಎಂಬ ಮಹಾಮಾರಿ ಬಿಟ್ಟುಬಿಡದೇ ಕಾಡುತ್ತಿದ್ದು, ಕಳೆದ ವರ್ಷ ಭಾರತದಲ್ಲಿ ನಿಯಂತ್ರಣಕ್ಕೆ ಬಂದಿತು ಎಂದುಕೊಂಡರೆ ಅಷ್ಟರಲ್ಲಾಗಲೇ ಈಗ ಮತ್ತೆ ಏರಿಕೆಯಾಗುತ್ತಿದೆ. ಈ ಮಹಾಮಾರಿ ಈಗ ರಾಜ್ಯದಲ್ಲು ಕಾಲಿಟ್ಟಿದ್ದು ಇದರ ನಡುವೆ ಡೆಂಗ್ಯೂ ಕಾಟ ಕೂಡ ಶುರುವಾಗಿದೆ.
ಕರ್ನಾಟಕ ರಾಜ್ಯದಲ್ಲಿ ದಿಢೀರನೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು, ಜನರು ಆತಂಕ ಪಡುವಂತೆ ಮಾಡಿದೆ. ಕೊರೊನಾ ಏರಿಕೆಯಾಗುತ್ತಿದ್ದಂತೆ ರಾಜ್ಉದಲ್ಲಿ ಡೆಂಗ್ಯೂ ಜ್ವರದ ಹಾವಳಿ ಮತ್ತೆ ಪ್ರಾರಂಭವಾಗಿದೆ. ಚಳಿಗಾಲದಿಂದ ಡೆಂಗ್ಯೂ ಜ್ವರ ಎಲ್ಲೆಡೆ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಸಧ್ಯ 1600ಕ್ಕೂ ಹೆಚ್ಚು ಪ್ರಕತರಣಗಳು ವರದಿಯಾಗಿದೆ. ಡೆಂಗ್ಯೂ ಜ್ವರಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಚಳೀಗಾಲ ನಡುವಿನಲ್ಲಿ ಡೆಂಗ್ಯೂ ಜ್ವರ ಆರಂಭವಾಗುದ್ದು, ಸೊಳ್ಳೆಗಳು ಕೂಡಾ ಹೆಚ್ಚಾಗಿದ್ದರಿಂದ ಜನರು ಸೊಳ್ಳೆಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕು ಕಡಿಮೆಯಾದ ಮೇಲೆ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆಯಾಗಿತ್ತು.ಆದರೆ ಈಗ ಡೆಂಗ್ಯೂವಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ರಾಜ್ಯದಲ್ಲಿ 16670 ಜನರನ್ನು ಕಾಡುತ್ತಿದೆ ಡೆಂಗ್ಯೂ ಜ್ವರ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.. ಬಿಬಿಎಂಪಿ ವ್ಯಾಪ್ತಿಯಲ್ಲೇ 8609 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಈವರೆಗೂ 1.50ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಶಂಕಿತರು ಪತ್ತೆಯಾಗಿದ್ದು, ಡೆಂಗ್ಯೂ ಜತೆ ಚಿಕನ್ ಗುನ್ಯಾ ಕೇಸ್ ಗಳ ಸಂಖ್ಯೆಯೂ ಹೆಚ್ಚಳ. 1600ಕ್ಕೂ ಹೆಚ್ಚು ಜನರಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ.