ಶಂಭು ಗಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಘರ್ಷಣೆಯಿಂದ ಮೃತಪಟ್ಟ 21ರ ಹರೆಯದ ರೈತನ ಶವಸಂಸ್ಕಾರ ಮಾಡಲು ಕುಟುಂಬ ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಉದ್ಯೋಗ ಮತ್ತು ಇತರ ಆರ್ಥಿಕ ನೆರವನ್ನು ನೀಡದಿದ್ದರೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಬೇಡಿಕೆ ಇಟ್ಟಿದ್ದಾರೆ.
ರೈತರು ಮತ್ತು ಪೋಲೀಸರ ನಡುವಿನ ಬುಧವಾರ (ಫೆಬ್ರವರಿ 21) ಘರ್ಷಣೆ ನಡೆದಿದ್ದು, ಪ್ರತಿಭಟನಾ ನಿರತ ಯುವ ರೈತನೋರ್ವ ಸಾವನಪ್ಪಿದ್ದಾನೆ. ಹರಿಯಾಣ ಪೊಲೀಸರ ವಿರುದ್ಧ FIR ದಾಖಲಿಸಲು ಒತ್ತಾಯಿಸಿದ್ದಾದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಹರ್ಯಾಣ ಪೊಲೀಸರು ಹೇಳಿಕೊಂಡಂತೆ ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಗುಂಡು ಹಾರಿಸಲಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಪರಿಸ್ಥಿತಿ ತೀವ್ರ ಉದ್ವಿಗ್ನವಾಗಿದ್ದು, ರೈತರು ತಮ್ಮ ಆಂದೋಲನವನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯಲು ಇಂದು ಮಹಾಪಂಚಾಯತ್ ನಡೆಸಿದೆ. ಈ ಸಭೆಯಲ್ಲಿ ರೈತನನ್ನು ಕೊಂದ ಪೊಲೀಸರು ಮತ್ತು ಸಚಿವರ ವಿರುದ್ದ FIR ದಾಖಲಿಸಲು ಫೆಬ್ರವರಿ 21 ರಂದು ಕರಾಳ ದಿವಸ್ ಆವರಣೆ ಮಾಡಲಾಗುವುದು. ಮತ್ತು 26 ರಂದು ಟ್ರಾಕ್ಟರ್ ರ್ಯಾಲಿ ಮಾಡಲಾಗುವುದು. ನಾಳೆಯಿಂದ ರೈತ ಪ್ರತಿಭಟನೆ ಬೃಹತ್ ಪ್ರಮಾಣದಲ್ಲಿ ನಡೆಸುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.