ದೆಹಲಿ: ಮಹಿಳೆಯರ ಖಾತೆಗೆ ಜಮೆ ಆಗದ ರೂ. 2,500: ಆತಿಶಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಹಿಳೆಯರು ತಮ್ಮ ಖಾತೆಗಳಿಗೆ ₹2,500 ಜಮಾ ಆಗುವುದನ್ನು ಕಾಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕಿ ಆತಿಶಿ ಹೇಳಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8ರೊಳಗೆ ಎಲ್ಲಾ ಮಹಿಳೆಯರಿಗೆ ₹2,500 ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಅವರಿಗೆ ತಲುಪಿಲ್ಲ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ‘ಮಹಿಳಾ ಸಮೃದ್ಧಿ ಯೋಜನೆ’ ಅಡಿಯಲ್ಲಿ ದೆಹಲಿಯ ಮಹಿಳೆಯರಿಗೆ ತಿಂಗಳಿಗೆ ₹2,500 ಆರ್ಥಿಕ ನೆರವು ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ತಿಳಿಸಿರುವ ಆತಿಶಿ, ದೆಹಲಿಯ ಎಲ್ಲಾ ಮಹಿಳೆಯರು ಇಂದು (ಶನಿವಾರ) ತಮ್ಮ ಫೋನ್‌ಗಳನ್ನು ನೋಡುತ್ತಿದ್ದಾರೆ. ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಆಗುವ ಸಂದೇಶಕ್ಕಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭರವಸೆಯನ್ನು ಈಡೇರಿಸುತ್ತಾರೆ ಮತ್ತು ಅವರು ನೀಡಿರುವ ಭರವಸೆ ಕೇವಲ ಸುಳ್ಳು ಹೇಳಿಕೆಯಾಗಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ ಅವರು ತಿಳಿಸಿದ್ದಾರೆ.

More articles

Latest article

Most read