ದೆಹಲಿ ಮದ್ಯ ನೀತಿಯಲ್ಲಿನ ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಸಿಬಿಐ ಬಂಧಿಸಿದೆ. ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಇಡಿ ಮಾರ್ಚ್ 21 ರಂದು ಅವರನ್ನು ಬಂದಿಸಿತ್ತು.
ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ರೌಸ್ ಅವೆನ್ಯೂ ಕೋರ್ಟ್‌ಗೆ ಕರೆದುಕೊಂಡು ಬಂದಿತ್ತು. ನಂತರ ರೋಸ್ ಅವೆನ್ಯೂ ಕೋರ್ಟ್ ಸಿಬಿಐಗೆ ವಿಚಾರಣೆಗೆ ಅನುಮತಿ ನೀಡಿದ್ದು ಕೇಜ್ರಿವಾಲ್ ಅವರನ್ನು ಬಂಧಿಸಿದೆ.
ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮತ್ತು ಆಮ್ ಆದ್ಮಿ ಪಕ್ಷದ ಕಚೇರಿಯ ಹೊರಗೆ ಭಾರೀ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಬಗಿಬಂದೋಬಸ್ತನ್ನು ಮಾಡಲಾಗಿದೆ.
ಮಾರ್ಚ್ 21 ರಂದು ಇಡಿ ಕೇಜ್ರಿವಾಲ್ ಅವರನ್ನು ಮದ್ಯದ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ಅಂದಿನಿಂದ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.