ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯ ದಿನಾಂಕ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದ್ದು, ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. 70 ಸದಸ್ಯರ ವಿಧಾಸಭೆಯ ಅವಧಿ ಫೆ. 23 ರಂದು ಕೊನೆಗೊಳ್ಳಲಿದ್ದು, ಹೊಸ ಸದನವನ್ನು ರಚಿಸಲು ಅದಕ್ಕೂ ಮೊದಲು ಚುನಾವಣೆ ನಡೆಸಬೇಕಿದೆ. ಕಳೆದ ಹತ್ತು ವರ್ಷಗಳಿಂದ ಆಮ್ ಅದ್ಮಿ ಪಕ್ಷ ಅಧಿಕಾರದಲ್ಲಿದೆ. ಈ ಬಾರಿ ಆಪ್ ನಿಂದ ಅಧಿಕಾರವನ್ನು ಕಸಿದುಕೊಳ್ಳಲು ಬಿಜೆಪಿ ಮತ್ತುಕಾಂಗ್ರೆಸ್ ಹವಣಿಸುತ್ತಿವೆ. ಈಗಾಗಲೇ ಮೂರೂ ಪಕ್ಷಗಳು ಚುನಾವಣಾ ಅಖಾಡಾಕ್ಕಿಳಿದಿದ್ದು, ಮತದಾರರ ಓಲೈಕೆಯಲ್ಲಿ ತೊಡಗಿವೆ. ವಿಶೇಷವಾಗಿ ಮಹಿಳೆಯರು ದೆಹಲಿ ನಾಗರೀಕರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸುತ್ತಿವೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನೂ ಘೋಷಿಸಿವೆ.