Wednesday, December 11, 2024

ಖ್ಯಾತ ಪಂಜಾಬಿ ಪಾಪ್‌ ಗಾಯಕ ದಿಲ್ಜೀತ್ ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ

Most read

ಬೆಂಗಳೂರು: ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಬಾಲಿವುಡ್‌ ನ ಮುಂಚೂಣಿಯಲ್ಲಿರುವ ನಂಬರ್ 1 ಸ್ಟಾರ್ ನಟಿ. ಬಾಲಿವುಡ್ ಮಾತ್ರವೇ ಅಲ್ಲದೆ ಹಾಲಿವುಡ್​ನಲ್ಲಿಯೂ ತನ್ನ ನಟನೆಯನ್ನು ತೋರಿಸಿ ಬಂದ ಕನ್ನಡತಿ ದೀಪಿಕಾ ಪಡುಕೋಣೆ. ಆದರೂ ದೀಪಿಕಾ ಕನ್ನಡವನ್ನು ಮರೆತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಖ್ಯಾತ ಪಂಜಾಬಿ ಪಾಪ್‌ ಗಾಯಕ ದಿಲ್ಜೀತ್ ದೊಸ್ಸಾಂಗ್​ಗೆ ಕನ್ನಡ ಹೇಳಿಕೊಟ್ಟಿದ್ದಾರೆ ನಮ್ಮ ದೀಪಿಕಾ.

ದಿಲ್ಜೀತ್ ದೊಸ್ಸಾಂಗ್ ದೇಶದ ಪ್ರಮುಖ ನಗರಗಳಲ್ಲಿ ಸಂಗೀತ ಗೋಷ್ಠಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇವರ ಸಂಗೀತ ಸಂಜೆಯ ಟಿಕೇಟ್‌ ಗಳು ಕಡಲೆಪುರಿಯಂತೆ ಮಾರಾಟವಾಗುತ್ತವೆ. ಭಾರತದಲ್ಲಿ ‘ದಿಲ್ಲುಮಿನಾಟಿ’ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ.

ತಮ್ಮ ಪ್ರತಿ ಸಂಗೀತ ಸಂಜೆಯಲ್ಲಿ ಓರ್ವ ವಿಶೇಷ ಅತಿಥಿಯನ್ನು ವೇದಿಕೆಗೆ ಕರೆತರುವುದು ದಿಲ್ಜೀತ್ ವಿಶೇಷ. ವಿದೇಶಗಳಲ್ಲಿ ಶೋ ನಡೆಸಿದಾಗ ಹಾಲಿವುಡ್ ತಾರೆಯರನ್ನು ಅತಿಥಿಯಾಗಿ ವೇದಿಕೆಗೆ ಕರೆತರುತ್ತಾರೆ. ಬೆಂಗಳೂರಿನ ಶೋದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ನಟರೊಬ್ಬರನ್ನು ವೇದಿಕೆಗೆ ಕರೆತರುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಅಚ್ಚರಿ ಎಂಬಂತೆ ದಿಲ್ಜೀತ್ ದೊಸ್ಸಾಂಜ್  ಅವರು ನಟಿ ದೀಪಿಕಾ ಪಡುಕೋಣೆಯನ್ನು ಅತಿಥಿಯಾಗಿ ಕರೆತಂದು ಅಚ್ಚರಿ ಮೂಡಿಸಿದರು.

ದೀಪಿಕಾ ಪಡುಕೋಣೆ, ವೇದಿಕೆಗೆ ಬಂದಾಗ ದಿಲ್ಜೀತ್ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ನಡೆಸಿದರು. ಆದರೆ ಸರಿಯಾಗಿ ಕನ್ನಡ ಮಾತನಾಡಲು ಆಗಲಿಲ್ಲ. ಆಗ ದೀಪಿಕಾ ಪಡುಕೋಣೆ, ನಾನು ನಿಮ್ಮನ್ನು ಪ್ರೀತಿಸ್ತೀನಿ ಎಂದು ಕನ್ನಡದಲ್ಲಿ ಹೇಳಿಕೊಟ್ಟರು. ದಿಲ್ಜೀತ್ ದೊಸ್ಸಾಂಗ್ ಸಹ ದೀಪಿಕಾ ಪಡುಕೋಣೆ ಹೇಳಿಕೊಟ್ಟಂತೆ ಹೇಳಿದರು. ಆಗ ಅಭಿಮಾನಿಗಳ ಕರತಾಡನ ಮುಗಿಲು ಮುಟ್ಟಿತ್ತು.

ಚೆನ್ನೈ ಎಕ್ಸ್​ ಪ್ರೆಸ್​‌ ಸಿನಿಮಾ ಸಂದರ್ಭದಲ್ಲಿಯೂ ಶಾರುಖ್ ಖಾನ್​ಗೆ ದೀಪಿಕಾ ಕನ್ನಡ ಹೇಳಿಕೊಟ್ಟಿದ್ದರು.

More articles

Latest article