ಡೇಟಿಂಗ್‌ ಅಪ್‌ ಮೂಲಕ ಪರಿಚಯಿಸಿಕೊಂಡು ಹಿರಿಯ ನಾಗರೀಕರೊಬ್ಬರಿಗೆ 74 ಲಕ್ಷ ರೂ. ವಂಚಿಸಿದ ಮಹಿಳೆ

Most read

ಥಾಣೆ: ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಅಧಿಕ ಆದಾಯದ ಆಮಿಷವೊಡ್ಡಿ ಹಿರಿಯ ನಾಗರೀಕರೊಬ್ಬರಿಗೆ73.72 ಲಕ್ಷ ರೂ ವಂಚಿಸಿರುವ ಪ್ರಕರಣ ಥಾಣೆಯಲ್ಲಿ ವರದಿಯಾಗಿದೆ. ಈ ಮಹಿಳೆ ಚಿನ್ನದ ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ಇವರನ್ನು ಪುಸಲಾಯಿಸಿ ವಂಚಿಸಿದ್ದಾರೆ. ಕಳೆದ 2024 ರ ಮಾರ್ಚ್‌ ಮತ್ತು ಮೇ ನಡುವೆ ಈ ವಂಚನೆ ನಡೆದಿದ್ದು ಇದೀಗ ದೂರು ದಾಖಲಿಸಿದ್ದಾರೆ.

ಡೇಟಿಂಗ್‌ ಆ್ಯಪ್‌ ಮೂಲಕ ಇಲ್ಲಿನ ನ್ಯೂ ಪನ್ವೇಲ್‌ ಪ್ರದೇಶದಲ್ಲಿ ವಾಸಿಸುವ 62 ವರ್ಷದ ಹಿರಿಯ ನಾಗರೀಕರೊಬ್ಬರ ಜತೆ ವಂಚಕ ಮಹಿಳೆ ಸಂಪರ್ಕ ಸಾಧಿಸಿದ್ದಾಳೆ. ಆರಂಭದಲ್ಲಿ ಇಬ್ಬರೂ ವಾಟ್ಸಾಪ್‌ ನಲ್ಲಿ ಮಾತುಕತೆ  ಮುಂದುವರೆಸಿದ್ದಾರೆ. ನಂತರ ಈಕೆ ಚಿನ್ನದ ವ್ಯಾಪಾರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ಆಮಿಷವೊಡ್ಡಿದ್ದಾಳೆ ಎಂದು ಖಂಡೇಶ್ವರ ಪೊಲೀಸ್‌‍ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರು ತಿಂಗಳ ಅವಧಿಯಲ್ಲಿ 73.72 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಿಸಿದ್ದಾಳೆ. ಇವರ ಖಾತೆಗೆ ಯಾವುದೇ ಲಾಭಾಂಶ ಜಮಾ ಆಗುವುದಿಲ್ಲ. ಇವರು ಆ ಮಹಿಳೆಯನ್ನು ವಿಚಾರಿಸತೊಡಗಿದಾಗ ಈಕೆ ಸಂಪರ್ಕ ಕಡಿದುಕೊಂಡಿದ್ದಾಳೆ. ನಂತರ ಇವರು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

More articles

Latest article