ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿ ಕೇಳಿ ಪ್ರಾಣಿ ಪ್ರಿಯ. ತಮ್ಮ ಪಾರ್ಮ್ ಹೌಸಿನಲ್ಲಂತು ಅದೆಷ್ಟು ವಿಭಿನ್ನ ತಳಿಯ ಪ್ರಾಣಿಗಳನ್ನು ಸಾಕಿದ್ದಾರೋ ಅವರಿಗೆ ತಿಳಿದಿಲ್ಲ. ಇದೀಗ ಅಂಬಾರಿ ಹೊತ್ತ ಆನೆ ಅರ್ಜುನನ ಸಮಾಧಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ದರ್ಶನ್ ಅವರ ಜೊತೆಗೆ ಅವರ ಅಭಿಮಾನಿಗಳು ಸಹ ಕೈಜೋಡಿಸಿದ್ದಾರೆ.
ಅರ್ಜುನ ಆನೆ ಬರೋಬ್ಬರಿ ಎಂಟು ಬಾರಿ ನಾಡ ಅಧಿದೇವತೆಯನ್ನು ಹೊತ್ತಿದೆ. ಆದರೆ ಕಳೆದ ವರ್ಷ ಒಂಟಿ ಸಲಗದ ಆರ್ಭಟಕ್ಕೆ ಸಾವಿಗೀಡಾಗಿತ್ತು. ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಾಗ ಈ ದುರ್ಘಟನೆ ನಡೆದಿತ್ತು. ಸಕಲೇಶಪುರದ ದಬ್ಬಳ್ಳಿಕಟ್ಟೆ ಗ್ರಾಮದಲ್ಲಿಯೇ ಆನೆಯನ್ನು ಸಮಾಧಿ ಮಾಡಲಾಗಿದೆ. ಸರ್ಕಾರಿ ಗೌರವಗಳೊಂದಿಗೆ ಸಮಾಧಿ ಮಾಡಿದ್ದರು. ಆದರೆ ಆನೆಯ ಸಮಾಧಿಯ ಅಭಿವೃದ್ದಿ ಮಾಡಿಲ್ಲ.
ಇತ್ತಿಚೆಗೆ ದರ್ಶನ್ ಈ ಬಗ್ಗೆ ಧ್ವನಿ ಎತ್ತಿದ್ದರು. ಆತನ ಸಮಾಧಿಗೆ ದಿಕ್ಕು ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಅದಕ್ಕೆ ಸಲ್ಲಬೇಕಾದ್ದ ಗೌರವ ಸಲ್ಲಲಿ. ಮಳೆಗಾಲ ಶುರುವಾಗುತ್ತಿದೆ. ಆದಷ್ಟು ಬೇಗ ಸಮಾಧಿಯ ಕೆಲಸ ಶುರುವಾಗಲಿ ಎಂದು ಪೋಸ್ಟ್ ಮಾಡಿದ್ದರು. ಇದೀಗ ಆ ಕೆಲಸಕ್ಕೆ ದರ್ಶನ್ ಅಭಿಮಾನಿಗಳು ಮುಂದಾಗಿದ್ದಾರೆ. ದರ್ಶನ್ ಅವರನ್ನು ಕೂಡ ಕರೆಯುತ್ತಿದ್ದು, ಅವರು ಒಂದೆಜ್ಜೆ ಮುಂದಿಟ್ಟಿದ್ದಾರೆ.
ಅಭಿಮಾನಿಗಳೆಲ್ಲ ಸೇರಿ ಅರ್ಜುನನ ಸಮಾಧಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲು ರೆಡಿಯಾಗಿದ್ದಾರೆ. ಜೊತೆಗೆ ದರ್ಶನ್ ಅವರೇ ಮುಂದೆ ನಿಂತು ಕೆಲಸವನ್ನು ಮಾಡಲು ಎಂದು ಫ್ಯಾನ್ಸ್ ಒತ್ತಾಸೆಯಾಗಿದೆ. ಅಭಿಮಾನಿಗಳ ಆಸೆಯಂತೆ ಹಾಗೂ ಅರ್ಜುನನ ಮೇಲಿರುವ ಪ್ರೀತಿಯಿಂದ ದರ್ಶನ್ ಒಂದೆಜ್ಜೆ ಮುಂದಿಟ್ಟು, ಸಮಾಧಿ ಕಟ್ಟಲು ಕಲ್ಲುಗಳ ವ್ಯವಸ್ಥೆ ಮಾಡುತ್ತಿದ್ದಾರಂತೆ. ಇದನ್ನು ತಿಳಿದ ಮತ್ತಷ್ಟು ಅಭಿಮಾನಿಗಳು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.