2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯು ರೋಚಕ ಪಂದ್ಯದೊಂದಿಗೆ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಪ್ರೇಕ್ಷಕರು ಈ ಪಂದ್ಯವನ್ನು ನೋಡಲು ಉತ್ಸುಕರಾಗಿದ್ದಾರೆ.
ಇಂದು (ಶುಕ್ರವಾರ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಉದ್ಘಾಟನಾ ಪಂದ್ಯ ಆರಂಭವಾಗಲಿದೆ.
ಐಪಿಎಲ್ 2024ರ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಬಹುದು ಎಂದುಕೊಂಡದ್ದ ನ್ಯೂಜಿಲ್ಯಾಂಡ್ ಆಲ್ರೌಂಡರ್ ಕನ್ನಡಿಗ ರಚಿನ್ ರವೀಂದ್ರ ಅವರನ್ನು ಸಿಎಸ್‌ಕೆ ತಂಡ 1.8 ಕೋಟಿ ರೂಪಾಯಿಗೆ ಖರೀದಿಸಿತು. ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ರಚಿನ್, ಇದೀಗ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಲಿದ್ದಾನರೆ.
ಹೆಸರು, ಜೆಸ್ಸಿ ಬದಲಾಯಿಗೆ ಅದೃಷ್ಟ ಪರೀಕ್ಷೆಗೆ ನಿಂತ ಆರ್‌ಸಿಬಿ
ಹೆಸರು, ಜೆರ್ಸಿ, ಲೋಗೋವನ್ನು ಬದಲಾಯಿಸಿರುವ ಆರ್‌ಸಿಬಿ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದೆ. ಇದಲ್ಲದೇ, ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ವಿರಾಟ್ ಕೊಹ್ಲಿ ಹೇಳಿದ್ದು, ತಂಡದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್ ಅವರಂತಹ ಸ್ಫೋಟಕ ಆಲ್‌ರೌಂಡರ್ ಗಳು ತಂಡದಲ್ಲಿ ಈ ಬಾರಿ ಕಪ್ ನಮ್ದು ಆಗ್ಬೇಕು ಎಂದು ಅಭಿಮಾನಿಗಳ ಒತ್ತಾಸೆಯಾಗಿದೆ.
ಮೊದಲ ಪಂದ್ಯಕ್ಕೆ ಮುನ್ನವೇ ಸಿಎಸ್‌ಕೆಗೆ ಆಘಾತ
ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ತಂಡದ ನಾಯಕತ್ವ ಕೊನೆ ಕ್ಷಣದಲ್ಲಿ ಬದಲಾಗಿದೆ. ಎಂ.ಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನವನ್ನು ಈಗ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರಿಗೆ ಸಿಎಸ್‌ಕೆ ತಂಡದ ನಾಯಕನ ಹೊಣೆ ನೀಡಲಾಗಿದೆ. ಇದು ಸಿಎಸ್‌ಕೆ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೋಮ್ರೋರ್, ಹಿಮಾಂಶು ಶರ್ಮಾ/ಕರಣ್ ಶರ್ಮಾ, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್, ವೈಶಾಖ್ ವಿಜಯ್ ಕುಮಾರ್. ಇಂಪ್ಯಾಕ್ಸ್ ಪ್ಲೇಯರ್ಸ್: ಆಕಾಶ್ ದೀಪ್, ಅನುಜ್ ರಾವತ್, ಮನೋಜ್ ಭಾಂಡಗೆ.
ಚೆನ್ನೈ ಸೂಪರ್ ಕಿಂಗ್ಸ್:
ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ. ಇಂಪ್ಯಾಕ್ಟ್ ಪ್ಲೇಯರ್ಸ್: ಸಮೀರ್ ರಿಜ್ವಿ, ತುಷಾರ್ ದೇಶಪಾಂಡೆ, ಶೇಕ್ ರಶೀದ್.