ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಭರ್ಜರಿ ಜಯ: ಮತ್ತೆ ಕೇಳುತಿದೆ ಈ ಸಲ ಕಪ್ ನಮ್ದೆ

Most read

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (RCB vs CSK) ತಂಡಗಳು ಮುಖಾಮುಖಿ ಆಗಿದ್ದು, ಬೆಂಗಳೂರು ಭರ್ಜರಿಯಾಗಿ ಗೆಲ್ಲುವ ಮೂಲಕ ಕಪ್ ಗೆಲ್ಲುವ ಕನಸ್ಸನ್ನು ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌‌ಸಿಬಿ ತಂಡವು ನಿಗದಿತ 20 ಓವರ್‌‌ಗೆ 5 ವಿಕೆಟ್‌‌ ನಷ್ಟಕ್ಕೆ 218 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಈ ಬೃಹತ್‌ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗೆ 7 ವಿಕೆಟ್‌‌ ನಷ್ಟಕ್ಕೆ  191  ರನ್‌ ಗಳಿಸುವ ಮೂಲಕ   27 ರನ್‌ ಗಳಿಂದ ಸೋಲನ್ನಪ್ಪಿತು.  ಆ ಮೂಲಕ ಆರ್‌‌ಸಿಬಿ ಪ್ಲೇಆಫ್‌ ತಲುಪಿತು.

ಆರ್‌‌ಸಿಬಿ ಪರ ವಿರಾಟ್ ಕೊಹ್ಲಿ 29 ಎಸೆತದಲ್ಲಿ 4 ಸಿಕ್ಸ್‌ ಹಾಗೂ 3 ಫೋರ್‌ ಮೂಲಕ 47 ರನ್‌ ಸಿಡಿಸಿದರೆ, ನಾಯಕ ಫಾಫ್‌ ಡುಪ್ಲೇಸಿಸ್‌‌ 39 ಎಸೆತದಲ್ಲಿ 3 ಸಿಕ್ಸ್, 3 ಬೌಂಡರಿ ಸಹಿತ 54 ರನ್‌ ಗಳಿಸಿದರು. ರಜತ್‌ ಪಾಟಿದಾರ್‌‌ 23 ಎಸೆತಕ್ಕೆ 41 ರನ್‌, ಕ್ಯಾಮರೂನ್‌ ಗ್ರೀನ್‌ 17 ಎಸೆತದಲ್ಲಿ 38 ರನ್, ದಿನೇಶ್ ಕಾರ್ತಿಕ್‌ 6 ಎಸೆತದಲ್ಲಿ 14 ರನ್, ಗ್ಲೇನ್‌ ಮ್ಯಾಕ್ಸ್‌ವೆಲ್ 5 ಎಸೆತದಲ್ಲಿ 16 ರನ್ ಗಳಿಸುವ ಮೂಲಕ ತಂಡವು ಅಂತಿಮವಾಗಿ 218 ರನ್‌ ಗಳಿಸಿತು. 

ಈ ಮೊತ್ತವನ್ನು ಬೆನ್ನತ್ತಿದ ಚೆನೈ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಚೆನ್ನೈ ತಂಡದ ನಾಯಕ ರುತುರಾಜ್‌ ಗಾಯಕ್ವಾಡ್‌‌ ಶೂನ್ಯಕ್ಕೆ ಔಟ್ ಆಗುವ ಮೂಲಕ ಆರಂಭದಲ್ಲಿಯೇ ಆಘಾತ ನೀಡಿದರು. ಬಳಿಕ ಡ್ಯಾರೆಲ್‌ ಮಿಚೆಲ್‌ 4 ರನ್‌ಗೆ ಔಟ್ ಆದರು. ಇನ್ನು, ರಚಿನ್‌ ರವೀಂದ್ರ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದ್ದಾದರೂ 37 ಎಸೆತದಲ್ಲಿ 3 ಸಿಕ್ಸ್‌ ಹಾಗೂ 5 ಫೋರ್‌ ಸಹಿತ 61 ರನ್‌ ಗಳಿಸಿ ಔಟಾದರು. ರಹಾನೆ 22 ಎಸೆತದಲ್ಲಿ 33 ರನ್‌ ಗಳಿಸಿ ಪೆವೆಲಿಯನ್‌ ಸೇರಿದರು. ಶಿವಂ ದುಬೆ 7 ರನ್, ಮಿಚೆಲ್‌ ಸ್ಯಾಟ್ನರ್‌ 3 ರನ್‌ ಗಳಿಸಿ ಔಟ್ ಆದರು. ಕೊನೆಯಲ್ಲಿ ಧೋನಿ 13 ಎಸೆತದಲ್ಲಿ 25 ರನ್‌ ಗಳಿಸಿದರೆ ರವೀಂದ್ರ ಜಡೇಜಾ 22 ಎಸತಕ್ಕೆ 44 ರನ್ ಗಳಿಸಿದರು. ಒಟ್ಟು 20 ಒವರ್ಗಳಿಗೆ 191ಕ್ಕೆ ಏಳು ವಿಕೆಟ್ ಪಥನವಾಗಿತ್ತು.

ಈ ಪಂದ್ಯದಲ್ಲಿ ಬೆಂಗಳೂರು ಚೆನೈ ವಿರುದ್ಧ 18 ರನ್ ಗಳ ಅಂತರದಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಗೆ ಹೋಗುವ ಅವಕಾಶವಿತ್ತು. ಆದರೆ RCB 28 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದ್ದು ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ಕಪ್ ಗೆಲ್ಲುವ ಕನಸನ್ನು ಇನ್ನು ಜೀವಂತವಿರಿಸಿದೆ. ಈಗ ಅಭಿಮಾನಿಗಳಲ್ಲಿ ಕೇಳಿಬರುತ್ತಿರುವುದು ಒಂದೇ ಈ ಸಲ ಕಪ್ ನಮ್ದೆ.

More articles

Latest article