ಬೆಂಗಳೂರು : “ನೀವು ಮಾತನಾಡುವ ಹಿಂದಿ ನೋಡಿಯೇ ನಮ್ಮ ಮಕ್ಕಳಿಗೆ ಹಿಂದಿ ಕಲಿಸುವುದು ಬೇಡ, ನಮ್ಮ ಮಕ್ಕಳು ನಿಮ್ಮ ಹಾಗೇ ಕಷ್ಟಪಡುವುದು ಬೇಡ” ….
ಇದು.. ಹಿಂದಿ ಕಡ್ಡಾಯವಲ್ಲ ಎಂಬ ಸರ್ಕಾರದ ಆದೇಶದ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಟೀಕೆಗಳು ವ್ಯಕ್ತವಾಗಿದೆ.
ರೈಲ್ವೆ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಕೈಬಿಟ್ಟಾಗ, ಸಿಲಿಂಡರ್ ಕೊರತೆ ಎದುರಾದಾಗ ಬರದ ಶೋಭಾ ಕರಂದ್ಲಾಜೆ ಹಿಂದಿ ಭಾಷೆ ಕೈಬಿಟ್ಟಾಗ ಬಂದಿದ್ಯಾಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಯಾವುದೇ ಭಾಷೆ ಕಲಿಯುವುದಕ್ಕೆ ಇರೋದು, ಅದು ಹೇರಿಕೆ ಅಲ್ಲ. ಮೊದಮೊದಲು ನಾವು ದೆಹಲಿಗೆ ಹೋದಾಗಲೂ ನಮ್ಮ ಭಾಷೆ ಕೇಳಿ ಅಲ್ಲಿನವರು ನಕ್ಕಿದ್ರು. ಹಿಂದಿ ಕಲಿಯುವುದರಿಂದ ಸಮಸ್ಯೆ ಏನಾಗುತ್ತೆ?. ರಾಜ್ಯ ಸರ್ಕಾರ ಅನಾವಶ್ಯಕವಾಗಿ ತ್ರಿಭಾಷಾ ನೀತಿ ಬಗ್ಗೆ ಗೊಂದಲ ಸೃಷ್ಟಿಸ್ತಿದೆ. ನಾವೂ ತ್ರಿಭಾಷಾ ಸೂತ್ರ ಕಲಿತಿದ್ದೇವೆ, ನಮಗೇನೂ ಸಮಸ್ಯೆ ಆಗಿಲ್ಲ. ಎಲ್ಲ ಭಾಷೆಯನ್ನೂ ಎಲ್ಲರೂ ಕಲೀಬೇಕು ಎಂದಿದ್ದರು.
ಶೋಭಾ ಅವರ ಈ ಹೇಳಿಕೆ ಕುರಿತು ಎಕ್ಸ್‌ನಲ್ಲಿ ನೂರಾರು ಮಂದಿ ತಮ್ಮ ಪ್ರತಿ ಹೇಳಿಕೆಯನ್ನು ದಾಖಲಿಸಿದ್ದಾರೆ. “ನೀವು ಮಾತನಾಡುವ ಹಿಂದಿ ನೋಡಿಯೇ ಕೈಬಿಟ್ಟಿರುವುದು, ನಿಮ್ಮ ಹಾಗೇ ನಮ್ಮ ಮಕ್ಕಳು ಕಷ್ಟಪಡುವುದು ಬೇಡ” ಎಂದು ಪೋಷಕರು ಪ್ರತಿಕ್ರಿಯಿಸಿದ್ದಾರೆ.
ಹಾಗೇಯೇ, ಮಕ್ಕಳು ಹಿಂದಿ ಬೇಡಾ ಅಂದಿದ್ದರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ಕೂಡ ನೂರಾರು ಕಮೆಂಟ್‌ಗಳು ಬಂದಿವೆ. ಹೌದು, ಮಕ್ಕಳು ಮತ್ತು ಪೋಷಕರು ಹಿಂದಿ ಬೇಡ ಅಂದಿದ್ದಾರೆ” , ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕೈಬಿಟ್ಟಾಗ ಎಲ್ಲಿ ಹೋಗಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದಾರೆ.








