ವೃದ್ಧಾಶ್ರಮಕ್ಕೆ  ಸೇರಿಸಿದ್ದಕ್ಕೆ  ವಯೋವೃದ್ಧ ಅಪ್ಪ, ಅಮ್ಮ ಆತ್ಮಹತ್ಯೆ

ಬೆಂಗಳೂರು: ಮಗನೇ ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದ ಪೋಷಕರು ಆತ್ಮಹತ್ಯೆ ಮಾಡಿಕೊಂಡ  ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.  ಕೃಷ್ಣಮೂರ್ತಿ (81) ಹಾಗೂ ಅವರ ಪತ್ನಿ ರಾಧಾ (74) ಮೃತ ಪೋಷಕರು. ಇವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ತಂದೆ ಹಾಗೂ ತಾಯಿಯನ್ನು ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದ. ಅದರಿಂದ ನೊಂದು ಆತ್ಮಹತ್ಯೆ ಮಾಡಿಕೊಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಸೊಸೆಯ ಜತೆ ಹೊಂದಾಣಿಕೆ ಇರಲಿಲ್ಲ. ಪದೇ ಪದೇ ಜಗಳ ನಡೆಯುತ್ತಿತ್ತು. ಇದೆ ಕಾರಣಕ್ಕೆ ಮಗ ತಂದೆ, ತಾಯಿಯನ್ನು ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದ ಎಂದು ತಿಳಿದು ಬಂದಿದೆ.

ವೃದ್ಧಾಶ್ರಮದಲ್ಲಿ ದಂಪತಿಗೆ ಪ್ರತ್ಯೇಕ ಕೊಠಡಿ ನೀಡಲಾಗಿತ್ತು. ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶ್ರಮದ ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಸೊಸೆಯ ಜೊತೆಗೆ ಹೊಂದಾಣಿಕೆ ಇರದ ಕಾರಣಕ್ಕೆ ಮಗ ಬೇರೆ ಮನೆ ಮಾಡಿಕೊಟ್ಟಿದ್ದ. 2021 ರಲ್ಲೂ ವೃದ್ದಾಶ್ರಮಕ್ಕೆ ತಂದೆ ತಾಯಿಯನ್ನು ಸೇರಿಸಿದ್ದ. ನಂತರ 2023ರಲ್ಲಿ ತಂದೆ ತಾಯಿಯನ್ನು ಮನೆಗೆ ಕರೆತಂದಿದ್ದ. ಮತ್ತೆ ಮನೆಯಲ್ಲಿ ಗಲಾಟೆ ಆರಂಭವಾಗಿದ್ದರಿಂದ ಕಳೆದ ತಿಂಗಳು ಬನಶಂಕರಿ ವೃದ್ಧಾಶ್ರಮಕ್ಕೆ ಸೇರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಊಟ ಮಾಡಿದ ಬಳಿಕ ದಂಪತಿ ಟಿ.ವಿ ನೋಡುತ್ತಿದ್ದರು. ಟಿ.ವಿ ಸೀರಿಯಲ್‌ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ನಂತರ, ಕೊಠಡಿಗೆ ತೆರಳಿದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article

Most read