ಕಟ್ಟಡದಿಂದ ಕೆಳಗೆ ಬಿದ್ದು ಕ್ರಿಕೆಟರ್ ಡೇವಿಡ್ ಜಾನ್ಸನ್ ಸಾವು

Most read

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ (52) ಮೃತಪಟ್ಟಿದ್ದಾರೆ.

ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಬಂಧಿಸಿದ್ದು ಡೇವಿಡ್ ಅವರು ಕಟ್ಟಡದಿಂದ ತಾವಾಗಿಯೇ ಬಿದ್ದರೇ ಅಥವಾ ಆಕಸ್ಮಿಕವಾಗಿ ಬಿದ್ದರೇ ಎಂಬುದು ತಿಳಿದುಬಂದಿಲ್ಲ.

ಎಸ್ ಎಲ್ ವಿ ಪ್ಯಾರಡೈಸ್ ಎಂಬ ಕಟ್ಟಡದ ನಾಲ್ಕನೇ ಮಹಡಿಯಿಂದ ಡೇವಿಡ್ ಜಾನ್ಸನ್ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಕರ್ನಾಟಕ ತಂಡದ ವೇಗದ ಬೌಲರ್ ಆಗಿದ್ದ ಡೇವಿಡ್ ಜಾನ್ಸನ್ ಭಾರತ ಕ್ರಿಕೆಟ್ ತಂಡವನ್ನು ಕೂಡ ಪ್ರತಿನಿಧಿಸಿದ್ದರು. ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಅವರು ಮೂರು ವಿಕೆಟ್ ಗಳಿಸಿದ್ದರು.

1996ರಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೇವಿಡ್ ಜಾನ್ಸನ್ ಮಿಚೆಲ್ ಸ್ಲೇಟರ್ ಅವರಿಗೆ ದಾಖಲೆಯ 157.8 ಕಿಮೀ ವೇಗದ ಚೆಂಡು ಎಸೆದು ಔಟ್ ಮಾಡಿದ್ದರು. .

More articles

Latest article