ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಂ-2 ಆಗಿರುವ ನಟ ದರ್ಶನ್ ಅವರಿಗೆ ಮೈಸೂರು ಜಿಲ್ಲೆಗೆ ತೆರಳುವುದಕ್ಕೆ ನೀಡಿದ್ದ ಅನುಮತಿಯನ್ನು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ಮತ್ತೆ ವಿಸ್ತರಿಸಿ ಆದೇಶಿಸಿದೆ.
ದರ್ಶನ್ ಅವರು ಬೆನ್ನು ನೋವಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅಲ್ಲಿಗೆ ತೆರಳಲು ನೀಡಿದ್ದ ಅನುಮತಿಯನ್ನು ಮುಂದುವರೆಸುವಂತೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಮತ್ತೆ ಫೆಬ್ರುವರಿ 10ರವರೆಗೆ ವಿಸ್ತರಣೆ ಮಾಡಿದೆ.
ಕೊಲೆ ಪ್ರಕರಣದಲ್ಲಿ ಆರು ತಿಂಗಳು ಜೈಲಿನಲ್ಲಿದ್ದ ದರ್ಶನ್ ಅವರು ಹೈಕೋರ್ಟ್‌ನಿಂದ ರೆಗ್ಯುಲರ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಮೇಲೆ ದರ್ಶನ್ ಮೈಸೂರಿಗೆ ತೆರಳುವುದಕ್ಕೆ ಅನುಮತಿ ಕೋರಿದ್ದರು. ಆಗ ನ್ಯಾಯಾಲಯ ಅನುಮತಿ ನೀಡಿತ್ತು. ಅವಧಿ ಮುಕ್ತಾಯವಾದ ನಂತರ ಮತ್ತೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿದೆ.