ಇಂದೋರ್: ಅಹಮದಾಬಾದ್ ಹಾಗೂ ಮುಂಬೈನ ನಡುವೆ 2022ರಲ್ಲಿ ಬುಲೆಟ್ ರೈಲು ಸಂಚಾರ ನಡೆಸಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಕುರಿತು ಪ್ರಸ್ತಾಪಿಸಲಾಗಿತ್ತು. ಈಗ ನಾವು 2025ರ ಮಧ್ಯ ಭಾಗದಲ್ಲಿದ್ದೇವೆ. ಆದರೆ ಬುಲೆಟ್ ರೈಲು ಬರಲೇ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಇಂದೋರ್ ಮೇಯರ್ ಆಗಿರುವ ಬಿಜೆಪಿ ಮುಖಂಡ ಪುಷ್ಯಮಿತ್ರ ಭಾರ್ಗವ ಅವರ ಪುತ್ರ ಸಂಗಮಿತ್ರ ಭಾರ್ಗವ.
ಸಂಗಮಿತ್ರ ಅವರು ದಾದಾ ನಿರ್ಭವ ಸಿಂಗ್ ಪಟೇಲ್ ಸ್ಮೃತಿ ಚರ್ಚಾ ಸ್ಪರ್ಧೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರ ವಹಿಸಿದ್ದ ಮಾತನಾಡಿದರು. ಈ ಸ್ಪರ್ಧೆಯನ್ನು ವೀಕ್ಷಿಸಲು ಮುಖ್ಯಮಂತ್ರಿ ಮೋಹನ ಯಾದವ್ ಅವರೂ ಭಾಗವಹಿಸಿದ್ದರು.
ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಂಗಮಿತ್ರ, ಬುಲೆಟ್ ರೈಲಿಗಾಗಿ ಕೋಟಿ ಕೋಟಿ ಹಣ ವೆಚ್ಚ ಮಾಡಲಾಗಿದೆ. ರೈತರ ಜಮೀನುಗಳನ್ನು ವಶಪಡಿಸಿಸಿಕೊಳ್ಳಲಾಗಿದೆ. ಆದರೆ ಬುಲೆಟ್ ರೈಲು ಮಾತ್ರ ಪವರ್‌ಪಾಯಿಂಟ್ ನಲ್ಲೇ ಉಳಿದುಕೊಂಡಿದೆ ಎಂದು ಟೀಕಿಸಿದರು.
ರೈಲ್ವೆ ಇಲಾಖೆ ‘ಕವಚ್‘ ಎಂಬ ಅಪಘಾತ ನಿರೋಧಕ ವ್ಯವಸ್ಥೆ ಜಾರಿಗೊಳಿಸಿ 10 ವರ್ಷ ಕಳೆದಿದೆ. ಆದರೆ ರೈಲು ಅಪಘಾತಗಳಲ್ಲಿ ಸುಮಾರು 20 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಟಿಕೆಟ್ ಖರೀದಿಸಿದರೂ ಕಾಯ್ದಿರಿಸುವಿಕೆಯಿಂದಾಗಿ ಸುಮಾರು 50 ಲಕ್ಷ ಜನರಿಗೆ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ದೇಶದ ಸಾಮಾನ್ಯ ರೈಲು ವ್ಯವಸ್ಥೆ ಹೀಗಿರುವಾಗ ಬುಲೆಟ್ ರೈಲು ಕುರಿತು ಮಾತನಾಡುವುದೇ ವ್ಯರ್ಥ ಎಂದು ಲೇವಡಿ ಮಾಡಿದರು.
ಸಂಗಮಿತ್ರ ಭಾಷಣಕ್ಕೆ ಮಾತನಾಡಿರುವ ವಿಡಿಯೊವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ.