ಕಮರ್ಷಿಯಲ್‌ ಸಿಲಿಂಡರ್‌ಗೆ ರಿಜಿಸ್ಟ್ರೇಷನ್‌ ಕಡ್ಡಾಯ : ಕೆ.ಹೆಚ್‌. ಮುನಿಯಪ್ಪ

ಬೆಂಗಳೂರು : ಕಮರ್ಷಿಯಲ್‌ ಸಿಲಿಂಡರ್‌ಗೆ ರಿಜಿಸ್ಟ್ರೇಷನ್‌ ಕಡ್ಡಾಯವೆಂದು ಸಚಿವ ಕೆ.ಹೆ.ಮುನಿಯಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಕಮರ್ಷಿಯಲ್‌ ಸಿಲಿಂಡರ್‌ಗೂ ನೋಂದಣಿ ಅಗತ್ಯವಿದೆ. ಗೇಲ್‌ ಕಂಪನಿಯಲ್ಲಿ ಒಂದು ವಾರದೊಳಗೆ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಇದರಿಂದ ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟಕ್ಕೆ ಸಂಪೂರ್ಣ ತೆರೆ ಬೀಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಎರಡನೇ ಪತ್ರ ಬರೆದ ನಂತರ ಸ್ಪಂದನೆ ದೊರೆತಿದ್ದು, ಶೇ.20ರಷ್ಟು ಹೆಚ್ಚುವರಿ ನೀಡಲು ಮುಂದಾಗಿದೆ. ಇದುವರೆಗೂ ಕೇಂದ್ರ ಸರ್ಕಾರ 9000 ಕಮರ್ಷಿಯಲ್‌ ಸಿಲಿಂಡರ್‌ ನೀಡುತ್ತಿತ್ತು. ಇದೀಗ 10,000 ಸಿಲಿಂಡರ್‌ ನೀಡಲಿದೆ ಎಂದು  ಹೇಳಿದರು. 
ಅಲ್ಲದೇ, ಅಡುಗೆ ಅನಿಲಕ್ಕೆ ಮೊಬೈಲ್‌ ಮೂಲಕ ಬುಕ್‌ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾಸ್‌ ಏಜೆನ್ಸಿ ಕಚೇರಿಗೆ ಹೋಗುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಸಭೆ : ವಾಣಿಜ್ಯ ಸಿಲಿಂಡರ್ ಹಂಚಿಕೆ ವಿಚಾರ ಸಚಿವ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಅನಿಲ‌ ಕಂಪನಿಗಳ‌ ಅಧಿಕಾರಿಗಳು , ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಭಾಗಿಯಾಗಿದ್ದಾರೆ.

ವಸಂತ ನಗರದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರೀಕ ಸರಭರಾಜು ನಿಗಮ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.  ಹೋಟೆಲ್ ಉದ್ಯಮಕ್ಕೆ ಎಷ್ಟು ಕೊಡಬೇಕು? ಆಸ್ಪತ್ರೆಗೆ ಎಷ್ಟು ಕೊಡಬೇಕು. ಹಾಸ್ಟೆಲ್, ಇಂದಿರಾ ಕ್ಯಾಂಟೀನ್, ಕೆಎಂಎಫ್ ಗೆ ಎಷ್ಟು ಎಂದು ಸೇರಿದಂತೆ ವಲಯವಾರು ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. 

More articles

Latest article

Most read