ಮಕ್ಕಳ ಕಥೆಪುಸಕ್ತದಲ್ಲಿ ರೂ. 70 ಕೋಟಿ ಮೌಲ್ಯದ 8 ಕೆಜಿ ಕೊಕೇನ್‌ ಕಳ್ಳಸಾಗಾಣೆ: ವಿಮಾನ ನಿಲ್ದಾಣದಲ್ಲಿ ಜಪ್ತಿ

ಬೆಂಗಳೂರು: ಮಕ್ಕಳ ಕಥೆ ಪುಸ್ತಕಗಳ ಒಳಗೆ ಅಡಗಿಸಿ ಬೆಂಗಳೂರಿಗೆ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು ರೂ. 7.7 ಕೆಜಿ ಉತ್ತಮ ಗುಣಮಟ್ಟದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಚಿಲಿಯ ಪ್ರಜೆ 70 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಈ ಕೊಕೇನ್‌ ನ ಮಾರುಕಟ್ಟೆ ಬೆಲೆ ಅಂದಾಜು 70-80  ಕೋಟಿ ರೂ. ಎನ್ನಲಾಗಿದೆ.

ಆರೋಪಿಯು ಅಡಿಸ್ ಅಬಾಬಾದಿಂದ ಎಥಿಯೋಪಿಯನ್ ಏರ್‌ಲೈನ್ಸ್‌ನ ET-690 ವಿಮಾನದಲ್ಲಿ ಆಗಮಿಸಿದ್ದ. ಈತನಿಗೆ ಸೌವ್ ಪೌಲೋದಲ್ಲಿ ಕೊಕೇನ್ ಹಸ್ತಾಂತರಿಸಲಾಗಿತ್ತು. ಆರೋಪಿಯು ಬ್ರೆಜಿಲ್‌ನ ನಿಂದ ಅಡಿಸ್ ಅಬಾಬಾಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದ. ಆರೋಪಿ ಸ್ಪ್ಯಾನಿಷ್ ಮಾತ್ರ ಮಾತನಾಡುತ್ತಿದ್ದು, ಹೆಚ್ಚಿನ ವಿವರ ಬಂದಿಲ್ಲ.

ಬಲ್ಲ ಮೂಲಗಳ ಖಚಿತ ಮಾಹಿತಿಯನ್ನಾಧರಿಸಿ ಆತನ ಲಗೇಜನ್ನು ಪರಿಶೀಲಿಸಿದಾಗ, ಸ್ಪ್ಯಾನಿಷ್ ಮಕ್ಕಳ ಕಥೆ ಪುಸ್ತಕಗಳೊಳಗೆ ಕೊಕೇನ್‌ ಪ್ಯಾಕೆಟ್‌ ಗಳನ್ನು ಅಡಗಿಸಿಡಲಾಗಿತ್ತು.  ಭಾರತದ ಡ್ರಗ್ಸ್‌ ಮಾರುಕಟ್ಟೆಯಲ್ಲಿ, ಬೇಡಿಕೆ ಮತ್ತು ಗುಣಮಟ್ಟವನ್ನು ಆಧರಿಸಿ ಕೊಕೇನ್ ಒಂದು ಕೆಜಿಗೆ ರೂ. 5 ಕೋಟಿ ಇಂದ 10 ಕೋಟಿವರೆಗೆ ಮಾರಾಟವಾಗುತ್ತದೆ.

More articles

Latest article

Most read