ಬೆಂಗಳೂರು: ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ “ವೀರ ಚಂದ್ರಹಾಸ” ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು.
ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ತನ್ನ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಕಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಇರುವ ಸಹಕಾರ ನೀಡಲಾಗುವುದು. ನಿಮ್ಮ ಇಡೀ ಕಲಾ ತಂಡಕ್ಕೆ ಮತ್ತು ಸಿನಿಮಾ ತಂಡಕ್ಕೆ ಶುಭಾಶಯಗಳು ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಮುಖ್ಯಮಂತ್ರಿಗಳ ಆಶೀರ್ವಾದ ಪಡೆದ ರವಿ ಬಸ್ರೂರು ತಂಡ ಅವರನ್ನು ಸಿನಿಮಾ ವೀಕ್ಷಣೆಗೆ ಬರಬೇಕು ಎಂದು ಆಹ್ವಾನಿಸಿದರು. ಬರುತ್ತೇನೆ ಎಂದು ಆಶ್ವಾಸನೆ ನೀಡಿದ ಮುಖ್ಯಮಂತ್ರಿಗಳು ಸಿನಿಮಾ ತಂಡಕ್ಕೆ ಮತ್ತೊಮ್ಮೆ ಶುಭ ಹಾರೈಸಿದರು.