5 ರೂ. ಕುರ್‌ ಕುರೆ ಪಾಕೆಟ್‌  ವಿಚಾರಕ್ಕೆ ಮಾರಾಮಾರಿ; ಹಲವರು ಆಸ್ಪತ್ರೆಗೆ ದಾಖಲು

ದಾವಣಗೆರೆ: ಕೇವಲ 5 ರೂ. ಕುರ್ಕುರೆ ಪಾಕೆಟ್‌  ವಿಚಾರಕ್ಕೆ ದೊಡ್ಡ ಮಾರಾಮಾರಿಯೇ ನಡೆದಿದ್ದು, ದೊಣ್ಣೆ ಲಾಠಿಗಳನ್ನು ಹಿಡಿದು ಹೊಡೆದಾಡಿರುವ ಪ್ರಕರಣ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ನಡೆದಿದೆ. ಈ ಕಲಹದಲ್ಲಿ 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ಸೇರಿದ್ದಾರೆ.  

ಕುರ್ ಕುರೆ ಪಾಕೆಟ್ ವಿಚಾರಕ್ಕೆ ಅತೀಫ್ ಉಲ್ಲಾ ಹಾಗೂ ಸದ್ದಾಂ ಕುಟುಂಬದ ನಡುವೆ ಈ ಜಗಳ ನಡೆದಿದೆ. ಅತೀಫ್ ಉಲ್ಲಾ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದು, ಅದೇ ಅಂಗಡಿಯಲ್ಲಿ ಸದ್ದಾಂ ಅವರ ಮಕ್ಕಳು ಕುರ್ ಕುರೆ ಖರೀದಿ ಮಾಡಿದ್ದಾರೆ. ಆದರೆ ಅವಧಿ ಮುಗಿದ ಕುರ್ ಕುರೇ ಮಾರಾಟ ಕೊಟ್ಟಿದ್ದೀಯಾ,  ಬೇರೆಯದನ್ನು ಕೊಡು ಎಂದು ಕೇಳಿದ್ದಕ್ಕೆ ಈ ಗಲಾಟೆ ನಡೆದಿದೆ. ಈ ಸಂಬಂಧ ಸದ್ದಾಂ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದೇ ವಿಚಾರಕ್ಕೆ ಅತೀಫ್ ಕುಟುಂಬದವರು, ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸದ್ದಾಂ ಕುಟುಂಬದ ಮೇಲೆ ಏಕಾಏಕಿ ಕಾರಿನಲ್ಲಿ ಬಂದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಹಲ್ಲೆ ಮಾಡುವ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದವರ ಮೇಲೂ  ಹಲ್ಲೆ ನಡೆದಿದ್ದು, ಗಾಯಗೊಂಡವರನ್ನು ಚನ್ನಗಿರಿ, ಭದ್ರಾವತಿ ಹಾಗೂ ಶಿವಮೊಗ್ಗ ಅಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬದವರು ಪರಸ್ಪರ  ದೂರು ದಾಖಲಿಸಿದ್ದಾರೆ. 20 ಕ್ಕೂ ಹೆಚ್ಚು ಜನರು ಬಂಧನ ಭೀತಿಯಿಂದ ಗ್ರಾಮವನ್ನು ತೊರೆದಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

More articles

Latest article

Most read