ಚಿತ್ರನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಶರಣು

ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ವಿನೋದ್ ವಿ. ದೋಂಡಾಲೆ ಸಾವಿಗೆ ಶರಣಾಗಿರುವ ಆಘಾತಕರ ಘಟನೆ ವರದಿಯಾಗಿದೆ.

ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡುಮಗುವನ್ನು ಅವರು ಅಗಲಿದ್ದಾರೆ.

ಆತ್ಮಹತ್ಯೆಗೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.

ಹಲವಾರು ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನೋದ್ ವಿ ದೋಂಡಾಲೆ ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಗರಡಿಯಲ್ಲಿ ಬೆಳೆದ ಪ್ರತಿಭಾವಂತ ನಿರ್ದೇಶಕ.

ಇತ್ತೀಚಿಗಷ್ಟೇ ಅವರು ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಅಶೋಕ ಬ್ಲೇಡ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿತ್ತು.

More articles

Latest article

Most read