ಉಡುಪಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಕಾರ್‌ ಫೈಟಿಂಗ್:‌ ಬೆಚ್ಚಿಬಿದ್ದ ಜನತೆ

ಉಡುಪಿ: ಇತ್ತೀಚಿಗೆ ಎರಡು ಗ್ಯಾಂಗ್‌ ಗಳ ನಡುವೆ ನಡೆದಿರುವ ಜಗಳ ವಿಕೋಪಕ್ಕೆ ಹೋಗಿ ಸಿನಿಮೀಯ ಮಾದರಿಯಲ್ಲಿ ಕಾರುಗಳ ಮೂಲಕ ಫೈಟಿಂಗ್‌ ನಡೆಸಿರುವ ಘಟನೆ ತಡವಾಗಿ ವರದಿಯಾಗಿದೆ.

ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಉಡುಪಿ ಮಣಿಪಾಲ ಹೈವೈ ಬಳಿಯ ಕುಂಜಿಬೆಟ್ಟು ಎಂಬಲ್ಲಿ ಘಟನೆ ನಡೆದಿದೆ.

ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಜಗಳ ವಿಕೋಪಕ್ಕೆ ಹೋದ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ದೃಶ್ಯಾವಳಿಯಲ್ಲಿ ಬಿಳಿಯ ಬಣ್ಣದ ಸ್ವಿಫ್ಟ್‌ ಕಾರೊಂದು ಉದ್ದೇಶಪೂರ್ವಕವಾಗಿ ಇನ್ನೊಂದು ಸ್ವಿಫ್ಟ್‌ ಕಾರಿಗೆ ಗುದ್ದುತ್ತದೆ. ಅದಾದ ನಂತರ ಬಿಳಿಯ ಬಣ್ಣದ ಸ್ವಿಫ್ಟ್‌ ಕಾರಿನಿಂದ ಇಳಿಯುವ ಒಬ್ಬ, ಗುದ್ದಲ್ಪಟ್ಟ ಕಾರಿನಿಂದ ಇಳಿದ ಮತ್ತೊಬ್ಬ ಕೈಯಲ್ಲಿ ಯಾವುದೋ ವಸ್ತುವನ್ನು ಬಿಳಿಯ ಸ್ವಿಫ್ಟ್‌ ಕಾರಿನ ಮೇಲೆ ಎಸೆಯುತ್ತಾರೆ. ಇದಾದ ನಂತರ ನಾಲ್ಕು ಮಂದಿ ಆ ಕಾರನ್ನು ತಡೆಯಲು ಯತ್ನಿಸುತ್ತಾರೆ. ಕಾರು ಚಲಾಯಿಸುವಾತ ಮನಸಿಗೆ ಬಂದಂತೆ  ಓಡಿಸುತ್ತ ಅಡ್ಡ ಬಂದ ಒಬ್ಬನ ಮೇಲೆ ಕಾರು ಹರಿಸುತ್ತಾನೆ.

ಈ ಘಟನೆ ಉಡುಪಿಯನ್ನು ಬೆಚ್ಚಿಬೀಳಿಸಿದ್ದು, ನಡುರಸ್ತೆಯಲ್ಲಿ ಈ ರೀತಿಯ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.

More articles

Latest article

Most read