ಮೆಗಾ ಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಶಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ. ಶಿರೀಶ್ ಅವರು 2007ರಲ್ಲಿ ಮೆಗಾಸ್ಟಾರ್ ಕಿರಿಯ ಪುತ್ರಿ ಶ್ರೀಜಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು.
ಮೆಗಾಸ್ಟಾರ್ ಕಿರಿಯ ಪುತ್ರಿ ಶ್ರೀಜಾ ಹಾಗೂ ಶಿರೀಶ್ ಅವರ ಮದುವೆಗೆ ಚಿರಂಜೀವಿ ಅವರ ಕುಟುಂಬ ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಜಾ, ಶಿರೀಶ್ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರು. 2014ರಲ್ಲಿ ಶ್ರೀಜಾ ಮತ್ತು ಶಿರೀಶ್ ದಾಂಪತ್ಯ ಮುರಿದು ಬಿದ್ದಿತ್ತು. ನಂತರ 2016ರಲ್ಲಿ ಉದ್ಯಮಿ ಕಲ್ಯಾಣ್ ದೇವ್ ಜೊತೆ ಶ್ರೀಜಾ ಎರಡನೇ ಮದುವೆ ಆಗಿದ್ದರು.
ಶ್ರೀಜಾ ಅವರ ಮಾಜಿ ಪತಿ ಶಿರೀಶ್ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶಿರೀಶ್ ಅವರು ಸಾವನಪ್ಪದ್ದಾರೆ ಎನ್ನಲಾಗಿದೆ.

                                    