ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಧನಂಜಯ ವೈ. ಚಂದ್ರಚೂಡ್ ನವೆಂಬರ್ 10ರಂದು ವಯೋನಿವೃತ್ತಿ ಕಾರಣ ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಬೇಕು ಎಂದು ಧನಂಜಯ ವೈ. ಚಂದ್ರಚೂಡ್ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು ಶಿಫಾರಸು ಮಾಡಿದ್ದಾರೆ.
ಧನಂಜಯ ವೈ. ಚಂದ್ರಚೂಡ್ ನವೆಂಬರ್ 9, 2022ರಂದು ಅಧಿಕಾರವಹಿಸಿಕೊಂಡಿದ್ದರು. ನವೆಂಬರ್ 10ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು 65 ವರ್ಷಕ್ಕೆ ವಯೋ ನಿವೃತ್ತಿ ಹೊಂದುತ್ತಾರೆ. ನಿವೃತ್ತಿ ಹೊಂದುವ ಮೊದಲು ತಮ್ಮ ಸ್ಥಾನಕ್ಕೆ ಯಾರು ನೇಮಕವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ಸುಪ್ರೀಂಕೋರ್ಟ್‌ನ 2ನೇ ಹಿರಿಯ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡಲಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಲಿದೆ.
ದೇಶದ 51ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ಸಂಜಯ್ ಖನ್ನಾ ಅವರು 6 ತಿಂಗಳ ಅವಧಿ ಹೊಂದಿದ್ದು, 2025 ಮೇ 13ಕ್ಕೆ ನಿವೃತ್ತರಾಗಲಿದ್ದಾರೆ.
1983ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ಖನ್ನಾರವರು ತೆರಿಗೆ, ಮಧ್ಯಸ್ಥಿಕೆ ವಾಣಿಜ್ಯ ಮತ್ತು ಪರಿಸರದ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. 2025ರಲ್ಲಿ ದೆಹಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದ ಖನ್ನಾ ಅವರು ಒಂದು ವರ್ಷದ ಬಳಿಕ ಖಾಯಂ ನ್ಯಾಯಮೂರ್ತಿಗಳಾಗಿದ್ದರು. 2019ರ ಜೂನ್ 18ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ 371 ನೇ ವಿಧಿಯನ್ನು ರದ್ದುಗೊಳಿಸಿದ ತೀರ್ಪುನೀಡಿದ ಪೀಠದಲ್ಲಿಯೂ ಇವರಿದ್ದರು.