Sunday, September 8, 2024

ಹೂ ಕೋಸು ಗೊಜ್ಜು ಮಾಡೋದು ಹೇಗೆ ಗೊತ್ತಾ..?

Most read

ಚಪಾತಿಯನ್ನೋ ರೊಟ್ಟಿಯನ್ನೋ ಮಾಡಿಟ್ಟು ಅದಕ್ಕೆ ಗ್ರೇವಿ ಏನು ಮಾಡೋದು ಎಂದು ಚಿಂತೆ ಮಾಡುತ್ತಿರುವವರಿಗೆ ಇಲ್ಲಿದೆ ಒಂದು ಸಿಂಪಲ್, ಟೇಸ್ಟೀ ಗ್ರೇವಿ. ಹೂ ಕೋಸಲ್ಲಿ ಈ ಗ್ರೇವಿ‌ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:


ಹೂ ಕೋಸು
ಅರಿಶಿನ
ಟಮೋಟೋ
ಗೋಡಂಬಿ
ಶುಂಠಿ-ಬೆಳ್ಳುಳ್ಳಿ
ಈರುಳ್ಳಿ
ಜೀರಗೆ
ಚಕ್ಕೆ ಲವಂಗ
ಎಣ್ಣೆ
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: ಮೀಡಿಯಂ ಸೈಜ್ ನ ಹೂ ಕೋಸನ್ನು ಚೆನ್ನಾಗಿ ಕಟ್ ಮಾಡಿ ಇಟ್ಟುಕೊಳ್ಳಿ. ಒಂದು ಪಾತ್ರೆಗೆ ನೀರು ಬಿಸಿ ಮಾಡಲು ಇಟ್ಟು ಅದಕ್ಕೆ ಉಪ್ಪು, ಅರಿಶಿನ ಪುಡಿ ಹಾಕಿ ಕುದಿಸಿ. ನೀರು ಕುದಿ ಬಂದ ಮೇಲೆ ಹೂ ಕೋಸು ಹಾಕಿ ಬೇಯಿಸಿಕೊಳ್ಳಿ. ಮತ್ತೊಂದು ಕಡಾಯಿಯಲ್ಲಿ ಎಣ್ಣೆ ಬಿಸಿಯಾದ ನಂತರ, ಗೋಡಂಬಿ, ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿ, ಅದರ ಜೊತೆಗೆ ಎರಡು ಹಸಿ ಟಮೋಟೋ ಹಾಕಿ ರುಬ್ಬಿಕೊಳ್ಳಿ.

ಅದೇ ಕಡಾಯಿಗೆ ಇನ್ನೊಂದು ಟೇಬಲ್ ಸ್ಪೂನ್ ಎಣ್ಣೆ ಹಾಕಿ, ಕಾದ ಬಳಿಕ ಖಾರದ ಪುಡಿ, ಬೇಯಿಸಿದಿ ಹೂಕೋಸು ಹಾಕಿ ಮಿಕ್ಸ್ ಮಾಡಿ. ಅದನ್ನು ಒಂದು ಕಡೆ ಎತ್ತಿಡಿ. ಅದೇ ಕಡಾಯಿಗೆ ಮತ್ತೆ ಎಣ್ಣೆ ಹಾಕಿ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಬಳಿಕ ರುಬ್ಬಿದ ಮಸಾಲೆಯನ್ನು ಹಾಕಿ, ಲಿಡ್ ಕ್ಲೋಸ್ ಮಾಡಿ ಐದು ನಿಮಿಷ ಬೇಯಿಸಿಕೊಳ್ಳಿ. ಎಣ್ಣೆ ಬಿಡುವ ತನಕ ಬೇಯಿಸಿ. ಬಳಿಕ ಗರಂ ಮಸಾಲೆ, ಧನ್ಯಪುಡಿ, ಖಾರದ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಆಗ ಲೋ ಫ್ಲೇಮ್ ನಲ್ಲಿ ಬೇಯಿಸಿ. ಎರಡು ನಿಮಿಷ ಬೆಂದ ಬಳಿಕ ಹೂಕೋಸು ಹಾಕಿ ಮಿಕ್ಸ್ ಮಾಡಿ. ನಿಮಗೆ ಎಷ್ಟು ಬೇಕೋ ಅಷ್ಟು ನೀರಾಕಿ ಚೆನ್ನಾಗಿ ಕುದಿಸಿಕೊಂಡರೆ ಗ್ರೇವಿ ರೆಡಿ.

More articles

Latest article