CATEGORY

ರಾಜ್ಯ

ಪೋಪ್ ಫ್ರಾನ್ಸಿಸ್ ನಿಧನ: ಅಂತ್ಯ ಸಂಸ್ಕಾರ ನಡೆಯುವುದು ಹೇಗೆ? ಹೊಸ ಪೋಪ್‌ ಆಯ್ಕೆ ಹೇಗೆ ನಡೆಯುತ್ತದೆ? ಇಲ್ಲಿವೆ ಕುತೂಹಲಕಾರಿ ಆಂಶಗಳು

ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರು ನಿಧನ ಹೊಂದಿದ್ದು, ವ್ಯಾಟಿಕನ್ ಸಿಟಿಯಲ್ಲಿ ಹತ್ತಾರು ಧಾರ್ಮಿಕ ಪ್ರಕ್ರಿಯೆಗಳು ಮತ್ತು ಹೊಸ ಪೋಪ್‌ ಆಯ್ಕೆ ನಡೆಯಲಿದೆ. ಇದರ ವಿಧ ವಿಧಿವಿಧಾನಗಳು ವಿಶಿಷ್ಟವಾಗಿದ್ದು ಕುತೂಹಲಕಾರಿ ಆಂಶಗಳು ಇಲ್ಲಿವೆ. ಹೊಸ...

ಮುಡಾ ಪ್ರಕರಣಕ್ಕೂ ಜಾತಿಗಣತಿ ಜಾರಿಗೂ ಸಂಬಂಧವಿಲ್ಲ: ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಜಾತಿ ಜನಗಣತಿಯನ್ನು ಮುನ್ನೆಲೆಗೆ ತಂದಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕುರ್ಚಿಗೆ ಆಪತ್ತು...

ಕನ್ನಡ ಭಾಷೆ ಪಾಲನೆ ಮಾಡುವಂತೆ ಮೈಸೂರು ಸ್ಯಾಂಡಲ್ಸ್‌ ಗೆ ನಿರ್ದೇಶನ ನೀಡಿ: ಕೈಗಾರಿಕಾ ಸಚಿವರಿಗೆ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ತಯಾರಾಗುವ ಎಲ್ಲ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಕನ್ನಡದಲ್ಲಿಯೂ ಮುದ್ರಿಸುವಂತೆ ಹೊರಡಿಸಿರುವ ಆದೇಶವನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು...

ನಿವೃತ್ತ ಡಿಜಿಪಿ ಓಂಪ್ರಕಾಶ್‌ ಹತ್ಯೆ ಪ್ರಕರಣ: ತಾಯಿ, ಸಹೋದರಿ ಹೆಸರು ಉಲ್ಲೇಖಿಸದೆ ದೂರು ನೀಡಿದ ಪುತ್ರ ಕಾರ್ತಿಕೇಶ್‌

ಬೆಂಗಳೂರು: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣದ ಸಂಬಂಧ ಎಚ್.ಎಸ್.ಆರ್ ಲೇಔಟ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಿಸಲಾಗಿದೆ. ಘಟನೆ ಕುರಿತು ಅವರ ಪುತ್ರ ಕಾರ್ತಿಕೇಶ್‌ ದೂರು...

ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಲು ಸಿ.ಎಂ ಸಿದ್ದರಾಮಯ್ಯ ಕರೆ

ಬೆಂಗಳೂರು: ಕರ್ನಾಟಕ ಪ್ರಗತಿಪರ ರಾಜ್ಯ. ಬಹುತೇಕ ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯಪ್ರಜ್ಞೆಯಿಂದ ರಾಜ್ಯ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ. ನಿಮ್ಮ ಕಾರಣದಿಂದ ರಾಜ್ಯ GST ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ವಾಟ್ಸಾಪ್‌ ಸಂದೇಶ ಕಳುಹಿಸಿ ರೂ. 39.95 ಲಕ್ಷ ದೋಚಿದ ಸೈಬರ್‌ ವಂಚಕರು; ದೂರು ದಾಖಲು

ಬೆಂಗಳೂರು: ಐಟಿಐ ಲೇ ಔಟ್‌ ನಿವಾಸಿಯೊಬ್ಬರಿಗೆ ನಿಮಗೆ ರೂ.5 ಕೋಟಿ ಲಾಭ ಬಂದಿದೆ ಎಂದು ಆ್ಯಪ್‌ ನಲ್ಲಿ ನಂಬಿಸಿ, ಸೈಬರ್‌ ವಂಚಕರು ರೂ. 39.95 ಲಕ್ಷ ಪಡೆದು ವಂಚಿಸಿರುವ ಪ್ರಕರಣ ವರದಿಯಾಗಿದೆ. ಖಾಸಗಿ...

ಬೆಂಗಳೂರಿನಲ್ಲಿ ಮತ್ತೆ ದಾಖಲಾದ ಸೈಬರ್‌ ವಂಚನೆ ಪ್ರಕರಣ: 84 ಲಕ್ಷ ರೂ. ಕಳೆದುಕೊಂಡ ಮಹಿಳಾ ಇಂಜಿನಿಯರ್‌

ಬೆಂಗಳೂರು: ಸೈಬರ್‌ ವಂಚನೆಗೆ ಒಳಗಾಗಬೇಡಿ ಎಂದು ಪೊಲೀಸ್‌, ಆರ್ ಬಿ ಐ, ಮಾಧ್ಯಮಗಳ ಆದಿಯಾಗಿ ಎಲ್ಲರೂ ಎಚ್ಚರಿಕೆ ನೀಡುತ್ತಲೇ ಬರಲಾಗುತ್ತಿದೆ. ಆದರೂ ವಂಚನೆಗೊಳಗಾಗುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅದರಲ್ಲೂ ಸುಶಿಕ್ಷಿತರೇ ಈ ವಂಚನೆಗೆ...

ಕರ್ನಾಟಕ ಹೈಕೋರ್ಟ್‌ನ ನಾಲ್ವರು ಸೇರಿ ಏಳು ನ್ಯಾಯಮೂರ್ತಿಗಳ ವರ್ಗಾವಣೆ

ಬೆಂಗಳೂರು:  ಕರ್ನಾಟಕ ಹೈಕೋರ್ಟ್‌  ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಕೆ.ನಟರಾಜನ್, ಹೇಮಂತ್ ಚಂದನಗೌಡರ್ ಮತ್ತು ಸಂಜಯ್ ಗೌಡ ಅವರನ್ನು ವಿವಿಧ ರಾಜ್ಯಗಳ ಹೈಕೋರ್ಟ್‌ ಗಳುಗೆ ವರ್ಗಾವಣೆ ಮಾಡಲಾಗಿದೆ. ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌...

ಕಸಾಪ ಬೈಲಾ ತಿದ್ದುಪಡಿ ಸರಿಯಲ್ಲ: ವೈ.ಕೆ. ಮುದ್ದುಕೃಷ್ಣ ಆಕ್ಷೇಪ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಸ್ಥಾನ ಎನ್ನುವುದು ಕನ್ನಡ ಪರಿಚಾರಿಕೆಯ ಹುದ್ದೆಯೇ ಹೊರತು, ಪರಮಾಧಿಕಾರ ಅನುಭವಿಸುವ ಹುದ್ದೆಯಲ್ಲ’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹೇಳಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್‌...

ಸಮಾಜ ಸೇವಕಿ ಮಂಗಳಮುಖಿ ಬರ್ಬರ ಹತ್ಯೆ; ಆಸ್ತಿಗಾಗಿ ನೂರು ದಿನದ ಹಿಂದೆ ಮದುವೆಯಾಗಿದ್ದ ಪತಿಯೇ ಹತ್ಯೆ ಮಾಡಿದ ಶಂಕೆ

ಬೆಂಗಳೂರು: 40 ವರ್ಷದ ಮಂಗಳಮುಖಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಬಸವೇಶ್ವರನಗರದ ಗಾಯತ್ರಿ ಲೇಔಟ್ನಲ್ಲಿ ನಡೆದಿದೆ. ತನುಶ್ರೀ ಹತ್ಯೆಗೀಡಾದ ದುರ್ದೈವಿ ಮಂಗಳಮುಖಿ. ಈಕೆಯನ್ನು ಆಕೆಯ ನಿವಾಸದಲ್ಲಿಯೇ ಮಾರಕಾಸ್ತ್ರದಿಂದ...

Latest news