CATEGORY

ದೇಶ

ಇಲ್ಲಿ  ಒಂದು ಕೆ.ಜಿ ಕರ್ಜಿಕಾಯಿಯ ಬೆಲೆ ಬರೋಬ್ಬರಿ ರೂ. 50 ಸಾವಿರ!

ಗೊಂಡಾ (ಉತ್ತರ ಪ್ರದೇಶ): ದೇಶದಾದ್ಯಂತ ಹೋಳಿ ಸಂಭ್ರಮ ಆರಂಭವಾಗಿದ್ದು, ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗೆಯೇ ಬೆಲೆಯೂ ಸಹಜವಾಗಿಯೇ ಏರುವುದು ವಾಡಿಕೆ. ಆದರೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬೇಕರಿಯೊಂದರಲ್ಲಿ ವಿಶೇಷವಾದ ಕರ್ಜಿಕಾಯಿ (ಗುಜಿಯಾ)...

ಬಿಜೆಪಿ ದೇಶವನ್ನು ಆರ್ಥಿಕ, ಸಾಮಾಜಿಕವಾಗಿ ದುರ್ಬಲಗೊಳಿಸಿದೆ: ಅಖಿಲೇಶ್ ಯಾದವ್ ಆರೋಪ

ಲಖನೌ: ಆಡಳಿತಾರೂಢ ಬಿಜೆಪಿ ದೇಶವನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ದುರ್ಬಲಗೊಳಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಮಾಜದಲ್ಲಿ ದ್ವೇಷ ಹರಡುತ್ತಿರುವುದರಿಂದ ದೇಶ...

ಸ್ಪೇಡೆಕ್ಸ್ ಉಪಗ್ರಹಗಳ ಡಿ–ಡಾಕಿಂಗ್ ಸಾಧಿಸಿದ ಇಸ್ರೊ

ನವದೆಹಲಿ: ಸ್ಪೇಡೆಕ್ಸ್ ಉಪಗ್ರಹಗಳ ಡಿ–ಡಾಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗುರುವಾರ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರನ ಕುರಿತಾದ ಅನ್ವೇಷಣೆ, ಮಾನವ ಸಹಿತ...

ಭಾರತ-ಪಾಕ್‌ ಗಡಿಯಲ್ಲಿ ಅದಾನಿ ಇಂಧನ ಯೋಜನೆಗೆ ಅನುಮತಿ; ವಿಪಕ್ಷಗಳ ಆಕ್ರೋಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಗೌತಮ್ ಅದಾನಿ ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಸೌರ ಯೋಜನೆಗಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ರಾಷ್ಟ್ರೀಯ ಭದ್ರತಾ ಶಿಷ್ಟಾಚಾರಗಳನ್ನು ಸಡಿಲಗೊಳಿಸಿರುವ ವಿಷಯ ಕುರಿತು ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿದೆ. ಗುಜರಾತ್‌...

ತಮಿಳುನಾಡು, ಪೆರಿಯಾರ್ ಅವರನ್ನು ಕೇಂದ್ರ ಅವಮಾನಿಸಿದೆ: ಉದಯನಿಧಿ ಆಕ್ರೋಶ

ಚೆನ್ನೈ: ತಮ್ಮನ್ನು ಟೀಕಿಸಿದವರಿಗೆ ಮತ್ತು ‘ಅನಾಗರಿಕರು’ ಎಂದು ಕರೆದವರಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಗುಡುಗಿದ್ದಾರೆ. ಕೇಂದ್ರ ಸರ್ಕಾರ ತಮಿಳುನಾಡು ಮತ್ತು ಪೆರಿಯಾರ್ ಅವರನ್ನು...

ಮಧ್ಯಪ್ರದೇಶ: ಕಾರು, ಜೀಪ್‌ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ; 7 ಜನರ ಸಾವು

ಧಾರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಗ್ಯಾಸ್ ಟ್ಯಾಂಕರ್, ಕಾರು ಮತ್ತು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ  7  ಮಂದಿ ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ 11 ಗಂಟೆ...

ಮಹಾರಾಷ್ಟ್ರ:  ಮರಾಠಿ ಭಾಷೆಯಲ್ಲೇ MPSC ಪರೀಕ್ಷೆ: ಸಿಎಂ ಫಡಣವೀಸ್ ಮಾಹಿತಿ

ಮುಂಬೈ: ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್‌ಸಿ) ಮುಖಾಂತರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮರಾಠಿ ಭಾಷೆಯಲ್ಲೇ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ರಾಜ್ಯ ವಿಧಾನ ಪರಿಷತ್ತಿನಲ್ಲಿ ಶಿವಸೇನಾ (ಯುಬಿಟಿ) ಶಾಸಕ ಮಿಲಿಂದ್...

ಡ್ರಗ್ಸ್‌ ಪೂರೈಕೆ ಆರೋಪ: ರಾಗಿಣಿ, ಸಂಜನಾ ವಿರುದ್ಧ ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಲು ಸಿಸಿಬಿ ಸಿದ್ದತೆ

ಬೆಂಗಳೂರು: ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಮಾದಕ ಪದಾರ್ಥಗಳನ್ನು (ಡ್ರಗ್ಸ್) ಪೂರೈಕೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಖ್ಯಾತ ಸ್ಯಾಂಡಲ್‌ ವುಡ್‌ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ವಿರುದ್ಧ ದಾಖಲಾಗಿದ್ದ...

ಕರ್ನಾಟಕದ ರೈಲ್ವೇ ಯೋಜನೆಗಳಿಗೆ ವೇಗ ನೀಡಲು ರಾಜ್ಯಸಭೆಯಲ್ಲಿ ಒತ್ತಾಯಿಸಿದ ಹೆಚ್.ಡಿ.ದೇವೇಗೌಡರು

ನವದೆಹಲಿ: ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೈಲ್ವೇ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಕೋರಿದರು. ರಾಜ್ಯಸಭೆಯಲ್ಲಿ ರೈಲ್ವೇ ಬಜೆಟ್ ಮೇಲಿನ ಚರ್ಚೆಯಲ್ಲಿ...

KPSC ಪರೀಕ್ಷೆ ಪ್ರಕರಣ ನ್ಯಾಯಾಲಯದಲ್ಲಿದೆ: ಕೋರ್ಟ್‌ ಸೂಚನೆ  ಕೊಟ್ಟರೆ ಮರು ಪರೀಕ್ಷೆ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು: KPSC ಪರೀಕ್ಷೆಯಲ್ಲಿ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ  ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಿಲುವಳಿ ಸೂಚನೆ ಮೇಲೆ ಕೆಪಿಎಸ್‌ಸಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ನೀಡಿದ...

Latest news