CATEGORY

ದೇಶ

ಮುಡಾ: ಹೈಕೋರ್ಟ್‌ ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ ಪೊಲೀಸರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃಧಿ ಪ್ರಾಧಿಕಾರ (ಮುಡಾ) 14 ನಿವೇಶನಗಳನ್ನು ಹಂಚಿರುವ ಪ್ರಕರಣ ಕುರಿತ ತನಿಖೆಗೆ ರಚಿಸಲಾಗಿದ್ದ ಲೋಕಾಯುಕ್ತ ತನಿಖಾ ತಂಡ ಅಂತಿಮ ವರದಿಯನ್ನು ಸಲ್ಲಿಸಲುಕಾಲಾವಕಾಶ ಕೋರಿದೆ....

ಕುಡಿಯುವ ನೀರನ್ನು ವ್ಯರ್ಥ ಮಾಡಿದರೆ ದಂಡ; ಹುಷಾರ್!

ಬೆಂಗಳೂರು: ಅಂತರ್ಜಲ ಕುಸಿತದಿಂದ ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಲಭ್ಯವಿರುವ ಶುದ್ದ ನೀರನ್ನು ಸಮರ್ಪಕವಾಗಿ ಬಳಸುವುದು ಬಹಳ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರನ್ನು ಸಾರ್ವಜನಿಕರು ವ್ಯರ್ಥವಾಗಿ...

 2023–24 ರಲ್ಲಿ ಬಿಜೆಪಿ ಆದಾಯ ರೂ. 4,340 ಕೋಟಿ; ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌

ನವದೆಹಲಿ: 2023–24ನೇ ಹಣಕಾಸು ವರ್ಷದಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಒಟ್ಟು ರೂ.5,820 ಕೋಟಿ ಆದಾಯ ಗಳಿಸಿವೆ. ಈ ಪೈಕಿ ಬಿಜೆಪಿಯ ಆದಾಯವು ಒಟ್ಟು ರೂ. 4,340 ಕೋಟಿಗಳಷ್ಟಿದೆ. ಅಂದರೆ ಆರು ರಾಷ್ಟ್ರೀಯ ಪಕ್ಷಗಳ ಒಟ್ಟು...

ಮಹಾರಾಷ್ಟ್ರ. ಆಂಧ್ರದಲ್ಲಿ ಗೀಲನ್ ಬಾ ಸಿಂಡ್ರೋಮ್‌  ರೋಗ; ಬೇಯಿಸದ ಚಿಕನ್‌ ತಿನ್ನದಂತೆ ಸಲಹೆ

ಅಮರಾವತಿ, ಪುಣೆ: ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಗೀಲನ್ ಬಾ ಸಿಂಡ್ರೋಮ್‌ ಗೆ (GBS) ಆಂಧ್ರಪ್ರದೇಶದಲ್ಲಿ ಓರ್ವ ಮಹಿಳೆ ಹಾಗೂ ಒಬ್ಬ ಬಾಲಕ ಮೃತಪಟ್ಟಿದ್ದಾರೆ. ಗುಂಟೂರಿನ ಕಮಲಮ್ಮ ಎಂಬುವವರು...

ಮಾರ್ಚ್‌ 7ರಂದು ಬಜೆಟ್ ಮಂಡನೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2025-26ನೇ ಸಾಲಿನ ಮಾರ್ಚ್‌ 7ರಂದು ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ವರ್ಷದ ಮೊದಲ ಅಧಿವೇಶನ ಮಾರ್ಚ್ 3ರಂದು ಆರಂಭವಾಗಲಿದೆ. ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಮೊದಲ ದಿನ...

ಅಮೆರಿಕಾದಿಂದ ಮೂರನೇ ಕಂತಿನಲ್ಲಿ ಮರಳಿದ ಭಾರತೀಯರು; ಬೇಡಿ ಹಾಕಿ ಕರೆ ತಂದಿದ್ದಾಗಿ ಆಪಾದನೆ

ನವದೆಹಲಿ: ಅಮೆರಿಕಾ ದೇಶದಿಂದ ಗಡಿಪಾರಾದ ಭಾರತೀಯರನ್ನು ಹೊತ್ತ ಮೂರನೇ ವಿಮಾನ ಭಾನುವಾರ ತಡರಾತ್ರಿ ಪಂಜಾಬ್‌ ನ ಅಮೃತಸರಕ್ಕೆ ಬಂದಿಳಿದಿದೆ. ಈ ಬಾರಿ ಅಕ್ರಮವಾಗಿ ವಾಸಿಸುತ್ತಿದ್ದ 112 ಭಾರತೀಯರನ್ನು ಅಮೆರಿಕಾ ವಾಪಸ್ ಕಳುಹಿಸಿದೆ. ಅಮೆರಿಕಾದ ನೂತನ...

ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರ ಸೂಚನೆ...

ದೆಹಲಿ: ಸಿಎಂ ಹುದ್ದೆಗೆ ಮಹಿಳೆ ಆಯ್ಕೆಗೆ ಬಿಜೆಪಿ ಚಿಂತನೆ

ನವದೆಹಲಿ:  ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರೂ  ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕಗ್ಗಂಟಾಗಿ ಉಳಿದಿದೆ. ಬಿಕ್ಕಟ್ಟು ಬಗೆಹರಿಯದ ಹಿನ್ನಲೆಯಲ್ಲಿ ಇಂದು ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ. 26 ವರ್ಷಗಳ...

ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ: ಸಚಿವ ಶಿವಾನಂದ ಪಾಟೀಲ

ಬೆಳಗಾವಿ: ಈ ಅವಧಿಗಷ್ಟೇ ಅಲ್ಲ ಮುಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಬಹುದು. ಇದರಲ್ಲಿ ತಪ್ಪೇನಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಮುಂದಿನ ಅವಧಿಯಲ್ಲೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ  ಅವರ ಅವಶ್ಯಕತೆ...

ಸಿಎಂ ಬಿಡಿ, ಪಿಎಂ ಮೋದಿಯನ್ನೇ ಬದಲಾಯಿಸಲು ಪ್ರಯತ್ನ ನಡೆದಿದೆ; ಸಚಿವ ಲಾಡ್‌

ಬೆಳಗಾವಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲೇ ಗೊಂದಲಗಳು ಉಂಟಾಗಿದ್ದು ಪ್ರಧಾನಿ ಮೋದಿ ವಿರುದ್ಧ ಬಿಜೆಪಿ ಸಚಿವರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಪ್ರಧಾನಿ ಸ್ಥಾನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಕೂರಿಸಬಹುದು ಎಂದು ಕಾರ್ಮಿಕ...

Latest news