ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ಲೋಕಸಭಾ ಚುನಾವಣೆ ಒಳಗೆ ಪೌರತ್ವ ತಿದ್ದುಪಡಿ ಮಸೂದೆ (CAA) ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ವಿವಾದಿತ CAA ಮಸೂದೆಯನ್ನು ದೇಶಾದ್ಯಂತ ಎದ್ದ ವಿರೋಧದಿಂದಾಗಿ ಇದುವರೆಗೆ ಜಾರಿಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಹೇಳಿಕೆ ಮಹತ್ವ ಪಡೆದುಕೊಂಡಿದೆ.
2019ರಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಡಿಸೆಂಬರ್ ತಿಂಗಳಲ್ಲಿ ಉಭಯ ಸದನಗಳಲ್ಲಿ ಅನುಮೋದನೆಯನ್ನೂ ಪಡೆದುಕೊಂಡಿತ್ತು. ಆದರೆ ಇದುವರೆಗೆ ಕಾಯ್ದೆಯ ನೋಟಿಫಿಕೇಷನ್ ಆಗಿರಲಿಲ್ಲ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಕಾಯ್ದೆಯ ನೋಟಿಫಿಕೇಷನ್ ಜಾರಿಗೊಳಿಸುವುದಾಗಿ ಅಮಿತ್ ಶಾ ಹೇಳುವುದರೊಂದಿಗೆ ಕಾಯ್ದೆ ಜಾರಿಯಾಗುವುದು ಖಚಿತವಾಗಿದೆ.
CAA ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡ ಮಸೂದೆಯಾಗಿದೆ. ಅದು ಖಂಡಿತವಾಗಿಯೂ ನೋಟಿಫೈ ಆಗಲಿದೆ. ಈ ವಿಷಯದಲ್ಲಿ ಯಾವುದೇ ಸಂದೇಹ ಬೇಡ. ಲೋಕಸಭಾ ಚುನಾವಣೆ ಪೂರ್ವದಲ್ಲೇ ಕಾಯ್ದೆ ಜಾರಿಯಾಗಲಿದೆ ಎಂದು ಶಾ ಎಕನಾಮಿಕ್ ಟೈಮ್ಸ್ ದಿಲ್ಲಿಯಲ್ಲಿ ಏರ್ಪಡಿಸಿದ್ದ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡುತ್ತ ಹೇಳಿದ್ದಾರೆ.
CAA ಈ ಹಿಂದೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಯಾಗಿತ್ತು. ದೇಶ ವಿಭಜನೆ ಆದಾಗ ಅಲ್ಪಸಂಖ್ಯಾತರು ನೆರೆಯ ದೇಶಗಳಲ್ಲಿ ಶೋಷಣೆ ಅನುಭವಿಸಿದರು. ಹೀಗೆ ಬೇರೆ ದೇಶಗಳಲ್ಲಿ ಸಮಸ್ಯೆ ಎದುರಿಸುತ್ತಿರುವ ನಿರಾಶ್ರಿತರನ್ನು ದೇಶಕ್ಕೆ ಕರೆತಂದು ಅವರಿಗೆ ಬದುಕು ಕಲ್ಪಿಸಿಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಈಗ ಅದು ತನ್ನ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಶಾ ಟೀಕಿಸಿದರು. CAA ನೆರೆದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆಯೇ ಹೊರತು ದೇಶದ ಯಾವ ನಾಗರಿಕರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದೇಶದ ಅಲ್ಪಸಂಖ್ಯಾತರನ್ನು, ಅದರಲ್ಲೂ ವಿಶೇಷವಾಗಿ ದೇಶದ ಮುಸ್ಲಿಂ ಸಮುದಾಯವನ್ನು ಸಿಎಎ ವಿಷಯದಲ್ಲಿ ಪ್ರಚೋದಿಸಲಾಯಿತು. ಕಾಯ್ದೆಯು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಕಿರುಕುಳ ಅನುಭವಿಸಿದ ನಿರಾಶ್ರಿತರಿಗೆ ಪೌರತ್ವ ನೀಡುತ್ತದೆಯಷ್ಟೆ ಎಂದು ಅವರು ಹೇಳಿದರು.
The CAA, introduced by the Narendra Modi government, aims to confer Indian ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಸಿಎಎ ಕಾಯ್ದೆಯನ್ವಯ ಬಾಂಗ್ಲಾದೇಶ, ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಿಂದ 2014 ಡಿಸೆಂಬರ್ 31ಕ್ಕೂ ಮುನ್ನ ವಲಸೆ ಬಂದ ಮುಸ್ಲಿಮೇತರ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಪಡೆಯಲಿದ್ದಾರೆ.