ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲಾಗಿದ್ದು, ಈ ತಿಂಗಳಿನಿಂದಲೇ ಜಾರಿಯಾಗಲಿದೆ.
ನೀರಿನ ದರ ಏರಿಕೆ ವಿವರ ಹೀಗಿದೆ
- ಗೃಹಬಳಕೆಯ ನೀರಿಗೆ ಗರಿಷ್ಠ ಲೀಟರ್ಗೆ 1 ಪೈಸೆ ಹೆಚ್ಚಳವಾಗಲಿದೆ.
- 0-8 ಸಾವಿರ ಲೀಟರ್ ಸ್ಲ್ಯಾಬ್ ಗೆ 15 ಪೈಸೆ ಹೆಚ್ಚಳವಾಗಲಿದೆ.
- 8-25 ಸಾವಿರ ಲೀಟರ್ ಸ್ಲ್ಯಾಬ್ ಗೆ 40 ಪೈಸೆ ಹೆಚ್ಚಳವಾಗಲಿದೆ.
- 25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದರೆ 80 ಪೈಸೆ ಏರಿಕೆಯಾಗಲಿದೆ.
- 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.
ಇನ್ನು ಮುಂದೆ ಪ್ರತಿ ವರ್ಷ ಏಪ್ರಿಲ್ 1ರಿಂದ ಶೇ. 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದರಿಂದ ಗೃಹ ಬಳಕೆದಾರರಿಗೆ ತಿಂಗಳಿಗೆ ರೂ. 20-30 ರೂ. ಹೆಚ್ಚುವರಿಯಾಗಿ ಹೊರೆಯಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಜಲಮಂಡಳಿ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ 2014 ರಿಂದೀಚೆಗೆ ನೀರು ಪೂರೈಕೆ ದರ ಹೆಚ್ಚಳ ಮಾಡಿಲ್ಲ. ಜಲ ಮಂಡಳಿ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ ಲೀಟರಿಗೆ ಒಂದು ಪೈಸೆಯನ್ನು ಹೆಚ್ಚಳ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು.