2025-26 ನೇ ಸಾಲಿನ ಕೇಂದ್ರ ಬಜೆಟ್ ಮುಖ್ಯಾಂಶಗಳು

Most read

ನವದೆಹಲಿ: ಎಂಟನೇ ಬಾರಿಗೆ ಬಜೆಟ್‌ ಮಂಡನೆಗೆ ಅವಕಾಶ ನೀಡಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿ ಬಜೆಟ್‌ ಆರಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್.‌

ಭಾರತದ ಅರ್ಥವ್ಯವಸ್ಥೆ ವೇಗದ ಗತಿಯಲ್ಲಿ ಬೆಳೆಯುತ್ತಿದೆ. ದೇಶದ ಬೆನ್ನೆಲುಬು ಅನ್ನದಾತನನ್ನು ನೆನೆದು ಬಜೆಟ್‌ ಮಂಡನೆ. ಧನ-ಧಾನ್ಯ ಕೃಷಿ ಯೋಜನೆ ವಿಸ್ತರಣೆ. 1.70ಕೋಟಿ ರೈತರಿಗೆ ಅನುಕೂಲ. ಕೃಷಿ ಉತ್ಪನ್ನಗಳ ಹೆಚ್ಚಳ ನಮ್ಮ ಗುರಿ. ನೀರಾವರಿ, ಸ್ಟೋರೇಜ್‌ ಗಳ ನಿರ್ಮಾಣ. ಕೃಷಿಯಿಂದ ಉದ್ಯೋಗ ಸೃಷ್ಟಿಯಾಗುತ್ತೆ. ಕೃಷಿಯಿಂದ ವಲಸೆ ತಡೆಯಬಹುದು.

 100 ಜಿಲ್ಲೆಗಳಲ್ಲಿ ಕಡಿಮೆ ಇಳುವರಿಯ ರೈತರ ಸಬಲೀಕರಣಕ್ಕೆ ಯೋಜನೆ. ಪಂಚಾಯ್ತಿ ಮಟ್ಟದಲ್ಲಿ ರೈತರ ಧಾನ್ಯ ಸಂಸ್ಕರಣೆಗೆ ಉತ್ತೇಜನ. ರಾಜ್ಯಗಳ ಸಹಭಾಗಿತ್ವದಲ್ಲಿ ಧನಧಾನ್ಯ ಕೃಷಿ ಯೋಜನೆ ಜಾರಿ.  ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ. ಯುವ ರೈತರು, ಸಣ್ಣ ರೈತರು, ಜಮೀನುರಹಿತರಿಗೆ ಯೋಜನೆ. 100 ಜಿಲ್ಲೆಗಳಲ್ಲಿ ಕೃಷಿ ಉತ್ಫಾದನೆ ಹೆಚ್ಚಳಕ್ಕೆ ಗುರಿ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಹೆಚ್ಚಳಕ್ಕೆ ಒತ್ತು.

10 ವರ್ಷಗಳ ಹಿಂದಿನ ನಮ್ಮ ಯೋಜನೆ ಯಶಸ್ವಿ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ. ಹಣ್ಣು, ತರಕಾರಿ ಉತ್ಪಾದನೆಗೆ ವಿಶೇಷ ಒತ್ತು. ಬೇಳೆ ಕಾಳು ಉತ್ಪಾದನೆಯಲ್ಲಿ ಆತ್ಮ ನಿರ್ಭರತೆ ಸಾಧಿಸಲು ಯೋಜನೆ.

 10 ವರ್ಷಗಳ ಸಿರಿಧಾನ್ಯಗಳ ಬೆಳೆಗೆ ಉತ್ತೇಜನ ನೀಡಲಾಗಿತ್ತ. ಇದರಿಂದ ಧಾನ್ಯ ಬೆಳೆಗಳ ಪ್ರಗತಿ. ಬೇಳೆ ಕಾಳು ಉತ್ಪಾದನೆಯಲ್ಲಿ ಆತ್ಮ ನಿರ್ಭರತೆ ಸಾಧಿಸಲು ಯೋಜನೆ. ರಾಜ್ಯಗಳ ಸಹಭಾಗಿತ್ವದಲ್ಲಿ ಉತ್ಪಾದನೆಗೆ ಒತ್ತು. ಈಗಾಗಲೇ ಕೈಗೊಂಡ ಕ್ರಮಗಳಿಂದ ಶೇ.50ರಷ್ಟು ಬೆಳೆ ಉತ್ಪಾದನೆ ಹೆಚ್ಚಳ.

ಸಿರಿಧಾನ್ಯ, ಹಣ್ಣು, ತರಕಾರಿ ಬೆಳೆಯಲ್ಲಿ ಪಪ್ರಗತಿ ಸಾಧಿಸಲಾಗಿದೆ. ರೈತರ ಉತ್ಪಾದನಾ ಸಹಕಾರ ಸಂಘಗಳ ರಚನೆ. ತಾವರೆ ಬೀಜ ಕೃಷಿಗೆ ವಿಶೇಷ ಯೋಜನೆ ಘೋಷಣೆ. ತಾವರೆ ಬೀಜ ಕೃಷಿಗೆ ಹೆಚ್ಚಿನ ಉತ್ತೇಜನ. ರೈತರ ಉತ್ಪಾದನಾ ಸಹಕಾರ ಸಂಘಗಳ ರಚನೆ. 5 ಅಂಶಗಳ ಆಧಾರದಲ್ಲಿ ಈ ಬಾರಿಯ ಬಜೆಟ್ ಮಂಡನೆ.

More articles

Latest article