ಹಾರ್ಮುಜ್ ಜಲಸಂಧಿ ಮುಕ್ತಕ್ಕೆ ಬ್ರಿಟನ್‌‌ ಪ್ರಧಾನಿ ನೇತೃತ್ವದಲ್ಲಿ ಸಭೆ

ಲಂಡನ್   : ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಾಗಾಣಿಕೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೇ 35  ದೇಶಗಳ ಮುಖ್ಯಸ್ಥರ ಸಭೆ ನಡೆಸುವುದಾಗಿ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬ್ರಿಟನ್‌ಗೆ ತೈಲ ಪೂರೈಕೆ ಮಾಡವುದಿಲ್ಲ ಎಂದು ಬೆದರಿಕೆ ಹಾಕಿದ ಬೆನ್ನಲ್ಲೇ ಬ್ರಿಟನ್‌ ಪ್ರಧಾನಿ ಅವರು ಸಭೆ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಅವರು ಟ್ರಂಪ್‌ ಬೆದರಿಕೆಗೆ ಜಗ್ಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಸಾಗರದಲ್ಲಿ ಸಿಲುಕಿರುವ ಹಡಗುಗಳು ಮತ್ತು ನಾವಿಕರ ಸುರಕ್ಷತೆ ಹಾಗೂ ಹೊರ್ಮುಜ್ ಜಲಸಂಧಿಯ ಸಂ ಚಾರ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಸಾಧ್ಯವಿರುವ  ಎಲ್ಲ ರಾಜತಾಂತ್ರಿಕ ಮತ್ತು ರಾಜಕೀಯ ಮಾರ್ಗ ಗಳ ಕುರಿತಂತೆ  ಈ ವಾರದಲ್ಲೇ ಸಭೆ ನಡೆಸಿ ಸಮಾಲೋಚನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಜಲಸಂಧಿಯನ್ನು ಇಂಧನ ಪೂರೈಕೆಗೆ ಮುಕ್ತಗೊಳಿಸುವ ಕುರಿತಂತೆ ಚರ್ಚೆ ನಡೆಸಲು ವಿಶ್ವದ 35 ದೇಶಗಳು ಸಹಿ ಹಾಕಿವೆ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹೇಳಿದ್ದಾರೆ.

ಬ್ರಿಟನ್‌ ಯಾವುದೇ ಕಾರಣಕ್ಕೂ ಅಮೆರಿಕಾ ಹಾಗೂ ಇರಾನ್‌ ನಡುವಿನ ಯುದ್ಧದಲ್ಲಿ ಪಾಲ್ಗೊಳ್ಳದೆ ತಟಸ್ಠವಾಗಿ ಉಳಿಯಲಿದೆ.ಬ್ರಿಟನ್ ಜನತೆಯ ಹಿತದೃಷ್ಟಿಯಿಂದ ಕಾರ್ಯೋನ್ಮುಖವಾಗುವುದಾಗಿ ಸ್ಟಾರ್ಮ ರ್ ಹೇಳಿದ್ದಾರೆ.

ಪ್ರಮುಖ ತೈಲ ಸರಬರಾಜು ಮಾರ್ಗದ ನೌಕಾ ಭದ್ರತೆಗಾಗಿ ಒಟ್ಟಿಗೆ ಕೆಲಸ ಮಾಡುವುದಾಗಿ 35 ದೇ ಶಗಳು ಹೇಳಿಕೆಗೆ ಸಹಿ ಹಾಕಿವೆ ಎಂದೂ ಅವರು ಹೇಳಿದ್ದಾರೆ

ಈ ಕುರಿತಾದ 35 ದೇ ಶಗಳ ಸಭೆಯನ್ನು ವಿದೇಶಾಂಗ ಕಾರ್ಯದರ್ಶಿ ವೆಟ್ಟೆ ಕೂಪರ್ ಮುನ್ನಡೆಸಲಿದ್ದಾರೆ. ಅಲ್ಲದೆ  ಯುದ್ಧ ಮುಗಿದ ಬಳಿಕ ನೌಕಾಮಾರ್ಗ ದ ಭದ್ರತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂ ದಿದ್ದಾರೆ.

ಬೆದರಿಕೆ ಹಾಕಿದ್ದ ಟ್ರಂಪ್‌ : ನೌಕಾಮಾರ್ಗದ ಸ್ಥಿರತೆ ಕಾಪಾಡಲು ಹಲವು ದೇಶಗಳ ಸಂಯುಕ್ತ ಮಿಲಿಟರಿ ಪಡೆ ಮತ್ತು ರಾಜತಾಂತ್ರಿಕ ಚಟುವಟಿಕೆ ಅಗತ್ಯವಿದೆ. ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ದಿಗ್ಬಂಧನ ತೆರವು ಮಾಡುವ ನಿಟ್ಟಿನಲ್ಲಿ ತಮ್ಮ ನೆರವಿಗೆ ಬಾರದಕ್ಕೆ ಬ್ರಿಟನ್ ಮತ್ತು ಫ್ರಾನ್ಸ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದರು. ನಿಮಗೆ ತೈಲ ಬೇ ಕಾದರೆ ನಮ್ಮ ಬಳಿ ಖರೀದಿಸಿ, ಇಲ್ಲವೇ ಹೊರ್ಮು ಜ್‌ಗೆ ಹೋ ಗಿ ತೆಗೆದುಕೊಳ್ಳಿ. ತಡವಾಗಿ ಯಾದರೂ ಕೊಂಚ ಧೈರ್ಯ ಮಾಡಿ ಎಂದಿದ್ದರು. ಅಲ್ಲದೆ, ಇನ್ನುಮುಂದೆ ಅಮೆರಿಕ ನಿಮಗೆ ಯಾವುದೇ ಸಹಾಯ ಮಾಡಲು ಬರುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ಟಾರ್ಮ ರ್ ಹೇ ಳಿಕೆ ಹೊರ ಬಿದ್ದಿದೆ.

More articles

Latest article

Most read