ನಾನು ಸತ್ಯ ಹೇಳಿದ್ದೇನೆ, ಬಿಜೆಪಿ ಕಾಲದಲ್ಲೂ ಹಣ ಕೊಟ್ಟರೆ ಮಾತ್ರ ಮನೆ ನೀಡಲಾಗುತ್ತಿತ್ತು:  ಶಾಸಕ ಬಿ.ಆರ್. ಪಾಟೀಲ

ಬೆಂಗಳೂರು: ನಾನು ಸತ್ಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಆಳಂದ ಶಾಸಕ ಬಿ. ಆರ್. ಪಾಟೀಲ ಹೇಳಿದ್ದಾರೆ.  ಬಿಜೆಪಿ ಸರ್ಕಾರದ ಅವಧಿಯಲ್ಲೂ ಇಂತಹದ್ದೆಲ್ಲ ನಡೆದಿದೆ ಎಂದೂ ಹೇಳಿದ್ದಾರೆ.

ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದರಷ್ಟೇ ಮನೆ ಮಂಜೂರು ಮಾಡಲಾಗುತ್ತದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ. ಆರ್‌. ಪಾಟೀಲ ಮಾತನಾಡಿರುವ ಆಡಿಯೊ ಬಹಿರಂಗವಾಗಿತ್ತು.

ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಾವು ಜನಪರ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದು, ಹೀಗಾಗಬಾರದಿತ್ತು. ಅದು ನಾನೇ ಮಾತನಾಡಿದ ಆಡಿಯೊ. ಎಲ್ಲ ಸರ್ಕಾರಗಳಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ತಿಳಿಸಿದರು.

ಕೆಲವು ಪಂಚಾಯಿತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಕ್ಕೆ ಮನೆಗಳು ಹಂಚಿಕೆ ಆಗಿಲ್ಲ. ನನ್ನ ಕ್ಷೇತ್ರಕ್ಕೆ ಮನೆಗಳನ್ನು ಕೊಡಿ ಎಂದು ನಾಲ್ಕು ಪತ್ರಗಳನ್ನು ಪತ್ರ ಕೊಟ್ಟರೂ ಮನೆಗಳನ್ನು ಕೊಟ್ಟಿರಲಿಲ್ಲ. ಪಂಚಾಯಿತಿ ಅಧ್ಯಕ್ಷರು ನಾನು ಕೊಟ್ಟ ಪತ್ರಗಳನ್ನೇ ಕೊಟ್ಟು ಮನೆಗಳನ್ನು ತಂದಿದ್ದಾರೆ. ಮುಖ್ಯಮಂತ್ರಿ ಕರೆದು ಮಾಹಿತಿ ಕೇಳಿದರೆ ಹೋಗಿ ಮಾಹಿತಿ ಕೊಡುತ್ತೇನೆ ಎಂದರು.

‌.

More articles

Latest article

Most read