ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ವಂಡರ್ಲಾ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಹಾಕಲಾಗಿದೆ. ಆ. 3ರಂದು ಕಳುಹಿಸಿದ್ದ ಬಾಂಬ್ ಬೆದರಿಕೆ ಸಂದೇಶ ತಡವಾಗಿ ಬೆಳಕಿಗೆ ಬಂದಿದೆ.
ಭಾನುವಾರ, ವಂಡರ್ಲಾದಲ್ಲಿ 3 ಬಾಂಬ್ ಸ್ಫೋಟಿಸುತ್ತೇವೆ ಎಂದು ಇಂಗ್ಲಿಷ್ ಬಳಸಿ ಉರ್ದು ಭಾಷೆಯಲ್ಲಿ ಇ ಮೇಲ್ ಮಾಡುವ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಆರೋಪಿಗಾಗಿ ಬಿಡದಿ ಪೊಲೀಸರು ಶೋಧ ನಡೆಸಿದ್ದಾರೆ.
ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುವ ಕನ್ನಡದ ಕಾಫೀರರಿಗೆ ಶಿಕ್ಷೆಯಾಗಲಿದೆ ಎಂದು ‘ಮೊಹಮ್ಮದ್ ಇರ್ಫಾನ್ ಜಿಹಾದಿ’ ಎಂಬ ಮೇಲ್ ಐಡಿಯಿಂದ ವಂಡರ್ಲಾ ಸಿಬ್ಬಂದಿಗೆ ಆಗಸ್ಟ್ 3ರಂದು ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಈ ಕುರಿತು ಬಿಡದಿ ಪೊಲೀಸರು ವಂಡರ್ ಲಾಗೆ ಹೋಗಿ ಪರಿಶೀಲನೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು ದೊರಕಿಲ್ಲ. ಈ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.