ದೆಹಲಿಯ 40 ಶಾಲೆಗಳಿಗೆ ಬಾಂಬ್ ಬೆದರಿಕೆ;ಆತಂಕದಲ್ಲಿ ಮಕ್ಕಳು, ಪೋಷಕರು

Most read

ನವದೆಹಲಿ: ಸೋಮವಾರ ಬೆಳ್ಳಂಬೆಳಗ್ಗೆ ದೆಹಲಿಯ 40 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ಆತಂಕ  ಸೃಷ್ಟಿಯಾಗಿದೆ. ಆರ್‌.ಕೆ. ಪುರಂನ ದೆಹಲಿ ಪಬ್ಲಿಕ್ ಸ್ಕೂಲ್, ಪಶ್ಚಿಮ ವಿಹಾರ್‌ನ ಜಿಡಿ ಗೋಯೆಂಕಾ ಶಾಲೆ, ಮಯೂರ್‌ವಿಹಾರ್‌ನ ಮದರ್ ಮೇರಿಸ್ ಸ್ಕೂಲ್, ಬ್ರಿಟಿಷ್ ಸ್ಕೂಲ್, ಸಲ್ವಾನ್ ಸ್ಕೂಲ್, ಮಾಡರ್ನ್ ಸ್ಕೂಲ್, ಕೇಂಬ್ರಿಡ್ಜ್ ಸ್ಕೂಲ್, ಡಿಎವಿ ಸ್ಕೂಲ್ ಟ್ರೀಟ್ ಸೇರಿದಂತೆ ಹಲವಾರು ಶಾಲೆಗಳಿಗೆ ಇ ಮೇಲ್‌ಮೂಲಕ ಶಾಲೆಗಳನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ.

ಎಲ್ಲಾ ಶಾಲೆಗಳೂ ಮಕ್ಕಳನ್ನು ಮನೆಗೆ ವಾಪಸ್‌ ಕಳುಹಿಸಿವೆ. ದೆಹಲಿ ಪೊಲೀಸರ ಪ್ರಕಾರ, ಇಂದು ಬೆಳಿಗ್ಗೆ ವಿಷಯ ತಿಳಿದು ಬಂದಿದ್ದು, ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ತಿಳಿಸಲಾಗಿದೆ.

ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೆದರಿಕೆ ಇಮೇಲ್ ಬಂದಿದೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಶಾಲೆಗಳ ಆವರಣಗಳನ್ನು ಪರಿಶೀಲಿಸಿದ್ದು, ಇದುವರೆಗೆ ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಆತ್ಮೀಯ ಪೋಷಕರೇ, ಶಾಲೆಗೆ ಬಾಂಬ್ ಬೆದರಿಕೆಯ ಕುರಿತು ಇಂದು ಬೆಳಿಗ್ಗೆ ಇಮೇಲ್ ಸ್ವೀಕರಿಸಲಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ತಕ್ಷಣವೇ ಮನೆಗೆ ಕಳುಹಿಸಲಾಗಿದೆ. ಬಸ್ ಗಳಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುವಂತೆ ಮೆಸೇಜ್‌ ಕಳುಹಿಸಲಾಗಿದೆ.  ನವೆಂಬರ್ 9 ರಂದು, ಪ್ರಶಾಂತ್ ವಿಹಾರ್‌ನಲ್ಲಿ ಸ್ಫೋಟ ಸಂಭವಿಸಿದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ದೆಹಲಿಯ ರೋಹಿಣಿಯಲ್ಲಿರುವ ಖಾಸಗಿ ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ನಂತರ ಅದು ಹುಸಿ ಕರೆ ಎನ್ನುವುದು ತಿಳಿದು ಬಂದಿತ್ತು.

 ಕರೆ ಸ್ವೀಕರಿಸಿದ ತಕ್ಷಣ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತಲುಪಿದರು. ನಂತರ, ಬಾಂಬ್ ಸ್ಕ್ವಾಡ್, ಶ್ವಾನ ದಳ, ಅಗ್ನಿಶಾಮಕ ದಳ, ವಿಶೇಷ ಸೆಲ್, ಸೈಬರ್ ಸೆಲ್ ಮತ್ತು ವಿಶೇಷ ಶಾಖೆಯ ಸಿಬ್ಬಂದಿ ಕೂಡ ಶಾಲೆಗೆ ತಲುಪಿದ್ದಾರೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

More articles

Latest article