ಬೆಂಗಳೂರು: ನಗರದ ರಾಜರಾಜೇಶ್ವರಿ ನಗರ, ಕೆಂಗೇರಿ ಸೇರಿದಂತೆ ವಿವಿಧ ಭಾಗಗಳ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. [email protected] ಎಂಬ ಇ-ಮೇಲ್ನಿಂದ ಸಂದೇಶ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಿದ್ದಾರೆ. ಆದರೆ ಈ ಇ ಮೇಲ್ ಗಳು ಹುಸಿ ಬೆದರಿಕೆ ಹಾಕಿವೆ ಎಂದು ತಪಾಸಣೆ ನಂತರ ತಿಳಿದು ಬಂದಿದೆ.
“ಹಲೋ, ಶಾಲಾ ತರಗತಿಗಳಲ್ಲಿ ನಾನು ಹಲವು ಸ್ಫೋಟಕ ವಸ್ತುಗಳು ಇರಿಸಿದ್ದೇನೆ. ಸ್ಫೋಟಕಗಳನ್ನು ಕಪ್ಪು ಪ್ಲಾಸ್ಟಿಕ್ ಚೀಲಗಳಿಂದ ಮುಚ್ಚಿಡಲಾಗಿದೆ. ನಿಮ್ಮೆಲ್ಲರನ್ನೂ ಈ ಲೋಕದಿಂದ ಅಳಿಸಿಹಾಕುತ್ತೇನೆ. ಯಾರೋಬ್ಬರು ಬದುಕುಳಿಯುವುದಿಲ್ಲ. ಈ ಸುದ್ದಿಯನ್ನು ನಾನು ನೋಡುವಾಗ ಸಂತೋಷದಿಂದ ನಗುತ್ತೇನೆ” ಎಂದು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಇಂದು ಬೆಳಗ್ಗೆ 7.21 ಕ್ಕೆ ಬಾಂಬ್ ಸಂದೇಶ ಬಂದಿದ್ದು ಶಾಲೆಗಳು ಪೊಲೀಸರಿಗೆ ಮಾಹಿತಿ ನೀಡಿವೆ.