ಇನ್ನು ಮುಂದೆ ಆಪ್‌ ನಲ್ಲಿ ನಮ್ಮ ಮೆಟ್ರೋ ಟಿಕೆಟ್‌ ಖರೀದಿ; ತಪ್ಪಿದ ಕಿರಿಕಿರಿ

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಸಂಚರಿಸುವವರಿಗೆ ಇನ್ನು ಮುಂದೆ ಟಿಕೆಟ್‌ ಖರೀದಿ ಕಿರಿ ಕಿರಿ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಯಾವುದೇ ಆಪ್‌ ನಲ್ಲಿ ಟಿಕೆಟ್‌ ಖರೀದಿಸಲು ಅನುಕೂಲವಾಗುವಂತೆ ಓಪಮ್‌ ನೆಟ್‌ ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌ (ಒಎನ್‌ ಡಿಸಿ) ಜತೆ ಬಿಎಂಆರ್‌ ಸಿಎಲ್‌ ಒಪ್ಪಂದ ಮಾಡಿಕೊಂಡಿದೆ.

ಪ್ರಸ್ತುತ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಪಾವತಿ ಮಾಡಿ ಟಿಕೆಟ್ ಖರೀದಿಸಲು ಮತ್ತು ಸ್ಮಾರ್ಟ್‌ ಕಾರ್ಡ್ ಮೂಲಕ ಸಂಚರಿಸಲು, ವಾಟ್ಸಾಪ್ ಚಾಟ್‌ ಬಾಟ್ ಹಾಗೂ ಪೇಟಿಎಂನಲ್ಲಿ ಟಿಕೆಟ್ ಖರೀದಿ ಮಾಡಲು ಅವಕಾಶವಿದೆ. ಇನ್ನು ಮುಂದೆ ಟುಮ್ಯಾಕೊ, ರೆಡ್‌ ಬಸ್, ಔಟ್ ಪಾಥ್, ಹೈವೇ ಡಿಲೈಟ್, ನಮ್ಮ ಯಾತ್ರಿ, ರಾಪಿಡೊ ಸೇರಿದಂತೆ ಹತ್ತಕ್ಕೂ ಅಧಿಕ ಅಪ್ಲಿಕೇಶನ್‌ ಗಳಲ್ಲಿ ಪ್ರಯಾಣಿಕರು ಟಿಕೆಟ್ ಖರೀದಿಸಲು ಅವಕಾಶ ಲಭ್ಯವಾಗಲಿದೆ.

ಈ ಯೋಜನೆಯಿಂದ ಪ್ರಯಾಣವನ್ನು ಸುಗಮಗೊಳಿಸುವ ಮತ್ತು ಸಾರ್ವಜನಿಕ ಸಾರಿಗೆಗಳನ್ನು ಸಂಯೋಜಿಸುವ, ಗುರಿಯನ್ನು ಹೊಂದಿದೆ. ಪ್ರಯಾಣಿಕರು ಏಕೀಕೃತ ಡಿಜಿಟಲ್ ಪ್ಲಾಟ್‌ ಫಾರ್ಮ್ ಮೂಲಕ ಮೆಟ್ರೊ ಟಿಕೆಟ್‌ ಗಳನ್ನು ಖರೀದಿಸಲು, ಸ್ಮಾರ್ಟ್‌ ಕಾರ್ಡ್‌ ಗಳನ್ನು ರೀಚಾರ್ಜ್‌ ಮಾಡಲು, ಬಸ್ ಪಾಸ್‌ ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಯಾತ್ರಿ ಮತ್ತು ರಾಪಿಡೊ ಆ್ಯಪ್‌ ಗಳಲ್ಲಿ ಮೆಟ್ರೊ ಟಿಕೆಟ್ ಪರೀಕ್ಷೆ ನಡೆಯುತ್ತಿದೆ. ಬಹು ಆ್ಯಪ್‌ ಗಳಲ್ಲಿ ಟಿಕೆಟ್ ಖರೀದಿಸುವುದರ ಸಾಧಕ- ಬಾಧಕಗಳನ್ನು ಕುರಿತು ಪರಿಶೀಲಿಸಲಾಗುತ್ತಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ.

ಈಗಾಗಲೇ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಸ್ವಯಂ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಇವು 30 ಸೆಕೆಂಡುಗಳಲ್ಲಿ ಟಿಕೆಟ್‌ ಗಳನ್ನು ಒದಗಿಸುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ವೇಳೆಯಲ್ಲಿ ಟಿಕೆಟ್‌ ಗೆ ಉಂಟಾಗುವ ನೂಕುನುಗ್ಗಲು ತಪ್ಪಿದೆ.

More articles

Latest article

Most read