ಅದರಲ್ಲೂ ಇತ್ತಿಚೆಗೆ ಆ ತರಕಾರಿ ತಿನ್ನಲ್ಲ.. ಈ ತರಕಾರಿ ತಿನ್ನಲ್ಲ ಅಂತ ಹೇಳಲೇಬಾರದು. ಯಾಕಂದ್ರೆ ಎಷ್ಟೆ ತರಕಾರಿ ತಿಂದರು ಸಿಗುವ ಪೌಷ್ಟಿಕಾಂಶ ಕಡಿಮೆಯೇ. ಅದರಲ್ಲೂ ಕಹಿ ಇರುವುದನ್ನು ಎಷ್ಟೋ ಜನ ಮುಟ್ಟುವುದೇ ಇಲ್ಲ. ಹಾಗಲಕಾಯಿ ಬೆಂದರೆ ಹಲವರಿಗೆ ಆಗಲ್ಲ. ಆದ್ರೆ ಇದರಲ್ಲಿ ಪಿತ್ತ ಹೋಗಲಾಡಿಸುವ ಶಕ್ತಿ ಇದೆ. ನಿಮಗೆ ಇಷ್ಟವಾಗುವಂತ ಹಾಗಲಕಾಯಿಯ ಎರಡು ರೆಸಿಪಿ ಇಲ್ಲಿ ತೋರಿಸುತ್ತೇವೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ
ಖಾರದ ಪುಡಿ
ಅರಿಶಿನ ಪುಡಿ
ಧನ್ಯ ಪುಡಿ
ಉಪ್ಪು
ಎಣ್ಣೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಕಡಲೇಬೀಜ
ಕಡಲೇಕಾಳು
ಉದ್ದಿನಬೇಳೆ
ಇತ್ಯಾದಿ
ಮಾಡುವ ವಿಧಾನ: ಮೊದಲಿಗೆ ಫ್ರೈ ಮಾಡುವುದು ಹೇಗೆ ಎಂಬುದನ್ನು ನೋಡಿಕೊಳ್ಳಿ. ಬೀಜ ತೆಗೆದು ಕಟ್ ಮಾಡಿಟ್ಟುಕೊಳ್ಳಿ. ಒಂದು ಬೌಲ್ ಗೆ ಹಾಗಲಕಾಯಿ ಹಾಗೂ ಉಪ್ಪು, ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಸಮಯ ಇಡಿ ಮೂವತ್ತು ನಿಮಿಷ ಆದಮೇಲೆ ನೀರಿನಂಶ ಬಿಟ್ಟು ಕೊಂಡಿರುತ್ತದೆ. ಅದನ್ನು ಮತ್ತೆ ವಾಶ್ ಮಾಡಿಕೊಳ್ಳಿ. ಒಂದು ಬಾಂಡಲಿಗೆ ಎಣ್ಣೆ ಹಾಕಿ, ಕಾದ ಬಳಿಕ ಹಾಗಲಕಾಯಿ ಹಾಕಿ ಉರಿದು ಕೊಳ್ಳಿ. ಒಂದು ಮಿಕ್ಸರ್ ಜಾರಿಗೆ ನಾಲ್ಕು ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ, ಉಪ್ಪು, ಖಾರದ ಪುಡಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಅಷ್ಟರಲ್ಲಿ ಹಾಗಲಕಾಯಿ ಫ್ರೈ ಆಗಿರುತ್ತದೆ. ಅದನ್ನ ಒಂದು ಪ್ಲೇಟ್ ಗೆ ಹಾಕಿ ಎತ್ತಿಟ್ಟುಕೊಳ್ಳಿ. ಹಾಗಲಕಾಯಿ ಮಧ್ಯ ಭಾಗಕ್ಕೆ ಸ್ಟಫ್ ಮಾಡಿ, ಅದೇ ಎಣ್ಣೆಗೆ ಕರಿಬೇವು ಹಾಕಿ, ಹಾಗಲಕಾಯಿ, ಉಳಿದ ಮಸಾಲೆ ಹಾಕಿ ಮಿಡಿಯಮ್ ಫ್ಲೇಮ್ ನಲ್ಲಿ ಬೇಯಿಸಿಕೊಂಡರೆ ಹಾಗಲಕಾಯಿ ಪಲ್ಯ ರೆಡಿ.
ಹಾಗಲಕಾಯಿ ಗ್ರೇವಿ ಮಾಡೋದು ಹೇಗೆ ಗೊತ್ತಾ..? ಹಾಗಲಕಾಯಿಯನ್ನು ರೌಂಡ್ ಆಗಿ ಕಟ್ ಮಾಡಿಕೊಂಡು, ಬೀಜವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಟೀ ಸ್ಪೂನ್ ಉಪ್ಪು ಹಾಕಿ ಮಿಕ್ಸ್ ಮಾಡಿ, ಅರ್ಧ ಗಂಟೆ ಎತ್ತಿಡಿ. ಅಷ್ಟರಲ್ಲಿ ಮಸಾಲೆ ರೆಡಿಮಾಡಿಕೊಳ್ಳಿ. ಕಡಲೇಬೀಜವನ್ನು ಫ್ರೈ ಮಾಡಿಕೊಳ್ಳಿ, ಅದಕ್ಕೇನೆ ಕಡಲೇಬೇಳೆ, ಉದ್ದಿನಬೇಳೆ ಹಾಕಿ ಉರಿದುಕೊಳ್ಳಿ. ಬಿಳಿ ಎಳ್ಳು, ಜೀರಿಗೆ, ಬ್ಯಾಡಗಿ ಮೆಣಸಿಕಾಯಿ, ಧನ್ಯ ಹಾಕಿ ಫ್ರೈ ಮಾಡಿಕೊಳ್ಳಿ. ತಣ್ಣಗಾದ ಮೇಲೆ ನೀರು ಹಾಕದೆ ರುಬ್ಬಿಕೊಳ್ಳಿ.
ಬಳಿಕ ಹಾಗಲಕಾಯಿಯನ್ನು ತೊಳೆದುಕೊಳ್ಳಿ. ಒಂದು ಕಡಾಯಿಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಹಾಗಲಕಾಯಿ ಹಾಕಿ ಫ್ರೈ ಮಾಡಿ. ಬಳಿಕ ಎತ್ತಿಟ್ಟುಕೊಳ್ಳಿ. ಅದೇ ಎಣ್ಣೆಗೆ ಮತ್ತೆ ಎಣ್ಣೆ ಹಾಕಿ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಜೀರಿಗೆ, ಕರಿಬೇವು ಹಾಕಿ ಫ್ರೈ ಮಾಡಿ. ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಆದ ಮೇಲೆ ಹಾಗಲಕಾಯಿ, ಖಾರದ ಪುಡಿ, ಅರಿಶಿನ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ರುಬ್ಬಿದ ಮಸಾಲೆಯನ್ನು ಬೆರೆಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಮೇಲೊಂದಿಷ್ಟು ಕೊತ್ತಂಬರಿ ಸೊಪ್ಪು ಉದುರಿಸಿ ಈಗ ಹಾಗಲಕಾಯಿ ಗೊಜ್ಜು ರೆಡಿ.