ಇನ್ನು ಮುಂದೆ ಬೆಳ್ಳಿ ಆಭರಣಗಳಿಗೂ BIS ಹಾಲ್‌ಮಾರ್ಕ್‌  ಕಡ್ಡಾಯ: ಕೇಂದ್ರ ಸರ್ಕಾರ ಆದೇಶ

Most read

ನವದೆಹಲಿ: ಕೇಂದ್ರ ಸರ್ಕಾರ ಇದೀಗ ಬೆಳ್ಳಿ ಮತ್ತು ಬೆಳ್ಳಿ ಆಭರಣಗಳ ಗುಣಮಟ್ಟ ಕಾಪಾಡುವಲ್ಲಿ #BIS ಹಾಲ್‌ಮಾರ್ಕ್‌ ಮತ್ತು #HUID ಅನ್ನು ಕಡ್ಡಾಯಗೊಳಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.

ನವದೆಹಲಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯ ಬೆಳ್ಳಿಯ ಗುಣಮಟ್ಟದಲ್ಲಿ ಅತ್ಯುತ್ತಮ ಸುಧಾರಣೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. BIS ಹಾಲ್‌ಮಾರ್ಕ್‌ ಮಾಡಿದ ಪ್ರತಿ ಬೆಳ್ಳಿ ವಸ್ತು, ಆಭರಣಗಳ ಮೇಲೆ #HUID ಕಡ್ಡಾಯಗೊಳಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಪ್ರಸ್ತುತದಲ್ಲಿ 17.35 ಲಕ್ಷಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು HUID -ಹಾಲ್‌ಮಾರ್ಕ್‌ ಆಗಿವೆ. ಬೆಳ್ಳಿಯ ಪರಿಶುದ್ಧತೆಯಿಂದ ಬೆಳ್ಳಿ ಖರೀದಿ ನಂತರವೂ ಪಾರದರ್ಶಕತೆ ಕಾಪಾಡಲೆಂದು ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಗ್ರಾಹಕರ ಹಿತರಕ್ಷಣೆಗೆ ಸರ್ಕಾರ ಬದ್ಧತೆ ತೋರಿದೆ. ಕೇಂದ್ರ ಗ್ರಾಹಕ ಇಲಾಖೆ ಬೆಳ್ಳಿಗೆ BIS ಮಾನದಂಡವನ್ನು ಪರಿಷ್ಕೃತಗೊಳಿಸಿದ್ದು, ಈವರೆಗಿದ್ದ 5 ಶ್ರೇಣಿಗಳನ್ನು 7ಕ್ಕೆ ವಿಸ್ತರಿಸಲಾಗಿದೆ.  ಅದರಂತೆ ಇದೀಗ ಈ ಮಾನದಂಡವು ಒಟ್ಟು 7 ಪರಿಶುದ್ಧತೆ ಶ್ರೇಣಿಗಳನ್ನು ಒಳಗೊಂಡಿದೆ. ಇದರಲ್ಲಿ 958 ಮತ್ತು 999 ಎರಡು ಹೊಸ ಶ್ರೇಣಿಗಳನ್ನು ಸೃಷ್ಟಿಸಲಾಗಿದೆ. ಒಟ್ಟಾರೆ 800, 835, 925, 958 (ಹೊಸ), 970, 990 ಮತ್ತು 999(ಹೊಸ) ಶ್ರೇಣಿಗಳಿವೆ.

ಗ್ರಾಹಕರು ಆಭರಣದಲ್ಲಿ ನಮೂದಿಸಿರುವ HUID ಮೂಲಕ ಬೆಳ್ಳಿಯ ಪರಿಶುದ್ಧತೆ, ಆಣಭರಣದ ಪ್ರಕಾರ (ಉಂಗುರ, ಕಾಲುಂಗರ, ಚೈನ್‌ ಇತ್ಯಾದಿ) ಹಾಗೂ ಬೆಳ್ಳಿ ವಸ್ತುಗಳಿಗೆ ಹಾಲ್‌ಮಾರ್ಕ್‌ ಮಾಡಿದ ಆಭರಣ ವ್ಯಾಪಾರಿಯ ವಿವರ ಮತ್ತು ಮೌಲ್ಯಮಾಪನ, ಹಾಲ್‌ಮಾರ್ಕ್‌ ಮಾಡಿದ ಕೇಂದ್ರದ ವಿವರವನ್ನೆಲ್ಲ ಪಡೆಯಬಹುದಾಗಿದೆ.

More articles

Latest article