Sunday, July 14, 2024

ಬಿಲ್ಕಿಸ್‌ ಬಾನು ಪ್ರಕರಣ : ಕಾರಗೃಹಕ್ಕೆ ಶರಣಾದ 11 ಆರೋಪಿಗಳು

Most read

ಬಿಲ್ಕಿಸ್‌ ಬಾನು ಪ್ರಕರಣದ ಎಲ್ಲಾ 11 ಮಂದಿ ಆರೋಪಿಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ಭಾನುವಾರ ರಾತ್ರಿ ಕಾರಗೃಹಕ್ಕೆ ಶರಣಾಗಿದ್ದಾರೆ.

ಸುಪ್ರೀಂ ಕೋರ್ಟ್‌ ವಿಧಿಸಿದ ಗಡುವಿನಂತೆ ಜನವರಿ 21ರ ಮಧ್ಯರಾತ್ರಿಗೆ ಮುಂಚಿತವಾಗಿ ಎಲ್ಲರೂ ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಗೋಧ್ರಾ ಉಪಕಾರಾಗೃಹಕ್ಕೆ  ಶರಣಾಗಿದ್ದಾರೆ ಎಂದು ಕ್ರೈಂ ಬ್ರ್ಯಾಂಚ್‌ ಇನ್‌ಸ್ಪೆಕ್ಟರ್‌ ಎನ್‌ ಎಲ್‌ ದೇಸಾಯಿ ಹೇಳಿದ್ದಾರೆ.

ಗುಜರಾತ್‌ ಸರ್ಕಾರ ಆಗಸ್ಟ್‌ 2022ರಲ್ಲಿ ಈ 11 ದೋಷಿಗಳನ್ನು ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಜನವರಿ 8ರ ತೀರ್ಪಿನಲ್ಲಿ ರದ್ದುಗೊಳಿಸಿತ್ತು.

ಕಳೆದ ವಾರ ದೋಷಿಗಳು ತಮಗೆ ಶರಣಾಗಲು ಹೆಚ್ಚಿನ ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತಲ್ಲದೆ ಭಾನುವಾರದೊಳಗೆ ಶರಣಾಗುವಂತೆ ಅವರಿಗೆ ಸೂಚಿಸಿತ್ತು.

More articles

Latest article