ಬಿಹಾರ ಚುನಾವಣೆ: ಸೋಲಿಗೆ ಕಾರಣಗಳನ್ನು ಹುಡುಕುವ ಆತ್ಮಾವಲೋಕನ ನಡೆಸಿದ ಕಾಂಗ್ರೆಸ್‌ ವರಿಷ್ಠರು

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಕುರಿತು ಕಾಂಗ್ರೆಸ್‌ ಆತ್ಮಾವಲೋಕನ ಆರಂಭಿಸಿದೆ.  ಮಹಾಘಟಬಂಧನದ ಹೀನಾಯ ಸೋಲನ್ನು ಕುರಿತು ಪಕ್ಷದ ವರಿಷ್ಠರಾದ ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಎಐಸಿಸಿ ಹಾಗೂ ಬಿಹಾರ ಮುಖಂಡರು ಆತ್ಮಾವಲೋಕನ ನಡೆಸಿದರು.

ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಇಂದಿರಾ ಭವನದಲ್ಲಿ ಬಿಹಾರದ ನಾಯಕರು ಮತ್ತು ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳನ್ನು ಭೇಟಿಯಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೇ ಮೊದಲ ಬಾರಿಗೆ ಬಿಹಾರ ರಾಜಕೀಯದ ಫಲಿತಾಂಶ ಕುರಿತು ಪಕ್ಷದ ಮುಖಂಡರು ಆತ್ಮಾವಲೋಕನ ನಡೆಸಿದ್ದಾರೆ. ವಿಧಾನಸಭೆಗೆ ಸೋಲಿಗೆ ಕಾರಣಗಳು ಹಾಗೂ ಈ ತಪ್ಪುಗಳು ಇತರ ರಾಜ್ಯಗಳ ಚುನಾವಣೆಯಲ್ಲಿ ಮರುಕಳಿಸದಂತೆ ಎಚ್ಚರವಹಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೇಂದ್ರ ಮೋದಿ ನೇತೃತ್ವದ ಎನ್‌ ಡಿ ಎ ಸರ್ಕಾರ ಮಹಿಳೆಯರಿಗೆ ನಗದು ಘೋಷಿಸಿದ್ದು ಸೇರಿದಂತೆ ಅನೇಕ ಯೋಜನೆಗಳು, ಪಕ್ಷದ ಆಂತರಿಕ ಕಲಹ ಹಾಗೂ ಭಿನ್ನಾಭಿಪ್ರಾಯಗಳು, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವಲ್ಲಿ ಆದ ವಿಳಂಬ ಪಕ್ಷದ ಸೋಲಿಗೆ ಕಾರಣ ಎಂದು ನಾಯಕರು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾಮೈತ್ರಿಕೂಟದ ಕಾಂಗ್ರೆಸ್ ಪಕ್ಷ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 6 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ಮಾತ್ರ ಯಶಸ್ವಿಯಾಗಿತ್ತು.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಹಾಗೂ 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಿತು. ನವೆಂಬರ್ 14ರಂದು ಫಲಿತಾಂಶ ಹೊರ ಬಿದ್ದಿತ್ತು. 202 ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ 202 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ನಿತೀಶ್‌ ಕುಮಾರ್‌ ಅವರು ಮತ್ತೆ  ಮುಖ್ಯಮಂತ್ರಿಯಾಗಿದ್ದಾರೆ.

More articles

Latest article

Most read