ಬಿಹಾರದ ಒಂದೇ ಮನೆಯಲ್ಲಿ 947 ಮತದಾರರು : ಇದು ನಿಜಕ್ಕೂ ಮ್ಯಾಜಿಕ್;‌ ಚುನಾವಣಾ ಆಯೋಗದ ವಿರುದ್ಧ ರಾಹುಲ್ ವಾಗ್ದಾಳಿ

Most read

ಪಟನಾ: ಬಿಹಾರ, ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನನಡೆಯುತ್ತಿರುವ ಮತ ಕಳ್ಳತನ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆ ಸಮಾವೇಶದಲ್ಲಿ ಇಂದು ಮಾತನಾಡಿದ ಅವರು ಗಯಾ ಜಿಲ್ಲೆಯಲ್ಲಿ ಬೂತ್‌ ವೊಂದರ ಒಂದೇ ಮನೆಯಲ್ಲಿ 947 ಮತದಾರರು ವಾಸವಿದ್ದಾರೆ. ಇದು ನಿಜಕ್ಕೂ ಮ್ಯಾಜಿಕ್‌ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷವೂ ಎಕ್ಸ್‌ ಮೂಲಕ ಈ ಮಾಹಿತಿ ಹಂಚಿಕೊಂಡಿದೆ. ಗಯಾ ಜಿಲ್ಲೆಯಲ್ಲಿ ಬಾರಾಚಟ್ಟಿ ವಿಧಾನಸಭಾ ಕ್ಷೇತ್ರದ ನಿಡಾನಿ ಗ್ರಾಮದಲ್ಲಿ ಒಂದೇ ಬೂತ್‌ ನ ಸುಮಾರು 947 ಮತದಾರರು ಮನೆ ಸಂಖ್ಯೆ 6 ರ ನಿವಾಸಿಗಳಾಗಿದ್ದಾರೆ ಎಂದು ತಿಳಿಸಿದೆ.

ಇಂತಹ ಅವಘಡಗಳು ಇದು ಕೇವಲ ಒಂದು ಹಳ್ಳಿಗೆ ಸೀಮಿತವಾಗಿಲ್ಲ. ಬಿಹಾರ ಸೇರಿದಂತೆ ದೇಶಾದ್ಯಂತ ಚುನಾವಣಾ ಅಕ್ರಮಗಳು ನಡೆಯುತ್ತಿರುವುದನ್ನು ಸಾಕ್ಷೀಕರಿಸುತ್ತವೆ ಎಂದು ಪ್ರತಿಪಾದಿಸಿದೆ.

More articles

Latest article