ಭೀಮಾ ಕೋರೆಗಾಂವ್‌ ಕದನ; ವಿಜಯೋತ್ಸವ ಆಚರಣೆ; 10 ಲಕ್ಷ ಜನರ ಭೇಟಿ

Most read

ಪುಣೆ: ಕೊರೆಂಗಾವ್ ಕದನ ವಿಜಯೋತ್ಸವದ 207ನೇ ವರ್ಷಾಚರಣೆ ಅಂಗವಾಗಿ ಮಹಾರಾಷ್ಟ್ರದ ಪುಣೆಯ ಕೊರೆಗಾಂವ್ ಭೀಮಾ ಗ್ರಾಮದಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು,  ‘ವಿಜಯ ಸ್ಥಂಭ’ಕ್ಕೆ ಗೌರವ ಸಮರ್ಪಿಸುತ್ತಿದ್ದಾರೆ.

ಇಂದು ಇಲ್ಲಿಗೆ ಸುಮಾರು 8ರಿಂದ 10 ಲಕ್ಷ ಜನರು ಭೇಟಿ ನೀಡುವ ಸಾಧ್ಯತೆ ಇದೆ. ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಮಾಹಿತಿ ನೀಡಿ 40,000 ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.  8,000 ಪೊಲೀಸರು ಹಾಗೂ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸೇರಿದಂತೆ ಇತರ ಇಲಾಖೆಗಳ ಸುಮಾರು 1.30 ಲಕ್ಷ ಸಿಬ್ಬಂದಿಯನ್ನು ಭದ್ರೆತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 1818 ರಲ್ಲಿ ಮಹರ್‌ ಜನಾಂಗವು ಪೇಶ್ವೆಗಳ ವಿರುದ್ಧ ಹೋರಾಟ ನಡೆಸಿದ್ದರ ನೆನಪಿಗಾಗಿ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಜನವರಿ ಒಂದರಂದು ಈ ಕದನ ನಡೆದಿತ್ತು.

More articles

Latest article