ಭಾರತ್‌ ಜೋಡೋ ನ್ಯಾಯ ಯಾತ್ರೆ- 52ನೆಯ ದಿನ

Most read

“ನಾವು ಅಧಿಕಾರಕ್ಕೆ ಬಂದಾಗ ರೈತರಿಗೆ ಎಂ ಎಸ್ ಪಿ ಮೂಲಕ ನ್ಯಾಯ ಒದಗಿಸುತ್ತೇವೆ. ಇಂದು ದೇಶದಲ್ಲಿ ಬಹುದೊಡ್ಡ ಜನಸಂಖ್ಯೆಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಅದನ್ನು ಒದಗಿಸುವ ಕೆಲಸ ನಾವು ಮಾಡುತ್ತೇವೆ” – ರಾಹುಲ್‌ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮಧ‍್ಯಪ್ರದೇಶದಲ್ಲಿ ಮುಂದುವರಿದಿದೆ.

ಯಾತ್ರೆಯ ಇಂದಿನ (05.03.2024) ಕಾರ್ಯಕ್ರಮಗಳು ಹೀಗಿದ್ದವು- ಮುಂಜಾನೆ 8.30 ಮಧ್ಯಪ್ರದೇಶ ಸಾರಂಗಪುರದ ಅಕೋಡಿಯಾ ನಾಕಾದಿಂದ ಯಾತ್ರೆ ಆರಂಭ. ಶಾಜಾಪುರ ತಂಕಿ ಚೌರಾಹದಿಂದ ಪಾದಯಾತ್ರೆ. ಶಾಜಾಪುರ ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಭಾಷಣ. ಮಕಶಿಯ ನೈನಾವಾಡ ಅಂಡರ್ ಬ್ರಿಜ್ ವಯಾ ಮಕಸಿಯಲ್ಲಿ ಸ್ವಾಗತ ಕಾರ್ಯಕ್ರಮ. 12.00 ಕ್ಕೆ ಮಧ್ಯಾಹ್ನದ ವಿರಾಮ, ಶಾಜಾಪುರ ಮಕಶಿಯ ವಿದ್ಯಾಶಂಕರ ಇಂಟರ್ ನ್ಯಾಶನಲ್ ಸ್ಕೂಲ್ ಬಳಿ.

ಮಧ‍್ಯಾಹ್ನ 2.00 ಕ್ಕೆ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ. ಗೋಪಾಲ ಮಂದಿರದಿಂದ ದೇವಸ್ ಗೇಟ್ ವರೆಗೆ ಪಾದಯಾತ್ರೆ; ವಯಾ ಕಾಂತಾಲ್ ಚೌರಾಹ- ಫವಾರಾ ಚೌಕ. ಬಳಿಕ ದೌಲತ್ ಗಂಜ್ ಚೌರಾಹದಲ್ಲಿ ಸಾರ್ವಜನಿಕ ಭಾಷಣ. ರಾತ್ರಿ ವಿಶ್ರಾಂತಿ ಮಧ‍್ಯಪ್ರದೇಶದ ಉಜ್ಜಯಿನಿ, ಬಡ್ನಗರದ ಇಂಗೋರಿಯಾದಲ್ಲಿ.

ಇಂದು ರಾಹುಲ್ ಗಾಂಧಿಯವರು ಉಜ್ಜಯಿನಿಯ ಮಹಾಕಾಲೇಶ‍್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.

ಯಾತ್ರೆಯ ಸಮಯದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾವು ಅಧಿಕಾರಕ್ಕೆ ಬಂದಾಗ ರೈತರಿಗೆ ಎಂ ಎಸ್ ಪಿ ಮೂಲಕ ನ್ಯಾಯ ಒದಗಿಸುತ್ತೇವೆ. ಇಂದು ದೇಶದಲ್ಲಿ ಬಹುದೊಡ್ಡ ಜನಸಂಖ್ಯೆಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಅದನ್ನು ಒದಗಿಸುವ ಕೆಲಸ ನಾವು ಮಾಡುತ್ತೇವೆ. ಪೇಪರ್ ಲೀಕ್ ಮತ್ತಿತರ ಕಾರಣಗಳಿಂದ ಯುವಜನರಿಗೆ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗುತ್ತಿದೆ. ಅವರು ನಿರುದ್ಯೋಗಿಗಳಾಗಿ ಅಲೆಯುವಂತಾಗಿದೆ. ಸೇನೆಗೆ ಸೇರಲು ಲಕ್ಷಾಂತರ ಯುವಜನರು ಸಿದ್ಧತೆ ನಡೆಸಿದ್ದರು. ಅಗ್ನಿವೀರ ಯೋಜನೆಯ ಮೂಲಕ ಅವರ ಕನಸುಗಳನ್ನು ನಾಶ ಮಾಡಲಾಯಿತು.

ನಾವು ದ್ವೇಷದ ಬಾಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಾಗಿದೆ. ಇದು ಬಹಳ ಸುಲಭ. ಉದಾಹರಣೆಗೆ ನಮ್ಮ ಯಾತ್ರೆಯ ಹಾದಿಯಲ್ಲಿ ಬಿಜೆಪಿಯ ಕಾರ್ಯಕರ್ತರು ಬಾವುಟ ಹಿಡಿದು ಅರಚುತ್ತಿದ್ದರು. ನಾನು ವಾಹನದಿಂದ ಇಳಿದು ಅವರೊಂದಿಗೆ ಬೆರೆತೆ. ತಕ್ಷಣ ಅವರು ಕಿರುಚುವುದನ್ನು ನಿಲ್ಲಿಸಿ ಮುಗುಳು ನಗತೊಡಗಿದರು. ಪ್ರೀತಿಯ ಅಂಗಡಿ ತೆರೆಯುವುದು ತುಂಬಾ ಸುಲಭ. ಯಾರು ಹೆದರುತ್ತಾರೋ ಅಂಥವರ ಒಳಗಿನಿಂದಲೇ ದ್ವೇಷ ಹುಟ್ಟುತ್ತದೆ. ಯಾರು ಹೆದರಿಕೆಯಿಲ್ಲದೆ ಕಷ್ಟಗಳನ್ನು ಎದುರಿಸುತ್ತಾರೋ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ” ಎಂದು ಅವರು ಹೇಳಿದರು.

ನಾಳೆಯೂ ಯಾತ್ರೆಯು ಮಧ್ಯಪ್ರದೇಶದಲ್ಲಿ ಮುಂದುವರಿಯಲಿದೆ.

ಯಾತ್ರೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕ ಜಯರಾಮ ರಮೇಶ್, ಪವನ್ ಖೇರಾ, ಸುಪ್ರಿಯಾ ಶ್ರೀನೇತ್ ಮೊದಲಾದವರಿಂದ ಒಡಿಶಾ, ಎಸ್ ಬಿ ಐ ಪ್ರಕರಣ ಸಹಿತ ಅನೇಕ ವಿಚಾರಗಳ ಬಗ್ಗೆ ಪತ್ರಿಕಾಗೋಷ್ಠಿಗಳೂ ನಡೆದವು.

ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ 51-ಭಾರತ್ ಜೋಡೋ ನ್ಯಾಯ ಯಾತ್ರೆ- 51ನೆಯ ದಿನ

More articles

Latest article