ಬೆಂಗಳೂರು ವಿಶ್ವವಿದ್ಯಾಲಯ ಸಾಗಿ ಬಂದ ಹಾದಿ ಕುರಿತು ಪುಸ್ತಕ ಬಿಡುಗಡೆ

Most read

ಬೆಂಗಳೂರು; ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದ 165 ವರ್ಷಗಳ ಗಮನಾರ್ಹ ಪಯಣದ ಅಪರೂಪ ಮತ್ತು ಒಳನೋಟವುಳ್ಳ ಪ್ರಬಂಧ ಸಂಕಲನ “ಬೆಂಗಳೂರು ವಿಶ್ವವಿದ್ಯಾಲಯದ ಒಡಿಸ್ಸಿ: 1858 ರಿಂದ 2024” ಎಂಬ ಪುಸ್ತಕವನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಬಿಡುಗಡೆ ಮಾಡಿದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಗಳ ಸಚಿವಾಲಯದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ವಿ. ಪದ್ಮಾ. ಈ ಪುಸ್ತಕವನ್ನು ಸಂಪಾದಿಸಿ ರಚಿಸಿದ್ದಾರೆ. ಬೆಂಗಳೂರು ವಿವಿ 1858 ರಲ್ಲಿ ಒಂದು ಸಣ್ಣ ಶಾಲೆಯಾಗಿ ಆರಂಭವಾಗಿ ಇಂದು ವಿಶ್ವಮಟ್ಟದ ವಿಶ್ವವಿದ್ಯಾಲಯವಾಗಿ ನಿರ್ಮಾಣವಾಗಿ ಹೆಮ್ಮೆಯಿಂದ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಕುಲಪತಿಗಳ ಕಾರ್ಯದರ್ಶಿ ದೃಷ್ಟಿಕೋನದಿಂದ ಓದುಗರು  ವಿಶ್ವವಿದ್ಯಾಲಯದ ಸವಾಲು,ಸಾಧನೆಗಳ ಬಗ್ಗೆ ಅರಿತುಕೊಳ್ಳಬಹುದಾಗಿದೆ.

ವಿಶ್ವವಿದ್ಯಾನಿಲಯದ ಶ್ರೀಮಂತ ಇತಿಹಾಸವನ್ನು ದಾಖಲಿಸುವಲ್ಲಿ ಮತ್ತು ಭವಿಷ್ಯದ ಪೀಳಿಗೆಗೆ ಅದರ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪದ್ಮಾ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಶ್ಲಾಘಿಸಿದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರು ಪ್ರೊ.ಎಸ್.ಆರ್.ನಿರಂಜನ,  ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವರಾದ ಶೇಕ್ ಲತೀಫ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಶ್ರೀನಿವಾಸ್ ಸಿ, ಪ್ರಸಾರಾಂಗದ‌ ನಿರ್ದೇಶಕರು ಡಾ.ನಾಗಭೂಷಣ ಸಿ.,ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜು ಗಾಂಧಿ  ಉಪಸ್ಥಿತರಿದ್ದರು.

More articles

Latest article