ಬೆಂಗಳೂರು: ವಾಡಿಕೆಯ ಬೇಸಿಗೆ ಆರಂಭಕ್ಕೆ ಕೆಲವು ವಾರಗಳು ಬಾಕಿ ಇರುವಾಗಲೇ ಉದ್ಯಾನ ನಗರಿ ಬೆಂಗಳೂರಿನಲ್ಲಿ ಈಗಾಗಲೇ ಬಿರು ಬಿಸಿಲು ಸುಡುತ್ತಿದೆ. ಈ ತಿಂಗಳ ಆರಂಭದಿಂದಲೇ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚುತ್ತಿದೆ. ಒಮ್ಮೊಮ್ಮೆ ಏಪ್ರಿಲ್ ತಿಂಗಳಲ್ಲಿ ಇದ್ದೇವೆಯೇ ಎಂದು ಭಾಸವಾಗುತ್ತಿದೆ.
ಫೆಬ್ರವರಿ 13, ಗುರುವಾರ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ಅಂದರೆ 33.3 ಡಿಗ್ರಿ ಸೆಲ್ಷಿಯಸ್ ನಷ್ಟು ಈ ವರ್ಷದ ಸಾಮಾನ್ಯ ಉಷ್ಣಾಂಶಕ್ಕೆ ಹೋಲಿಸಿದರೆ 2.7 ರಷ್ಟು ಹೆಚ್ಚು ದಾಖಲಾಗಿದೆ. ಕನಿಷ್ಠ ತಾಪಮಾನ 17.1ರಷ್ಡು ದಾಖಲಾಗಿದ್ದು, ಸಾಮಾನ್ಯಕ್ಕಿಂತ 0.1ರಷ್ಟು ಕಡಿಮೆ ದಾಖಲಾಗಿದೆ. ಬೆಂಗಳೂರು, ಚಿತ್ರದುರ್ಗ, ಚಿಂತಾಮಣಿ ಮೈಸೂರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನ 34 ಡಿಗ್ರಿ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಷಿಯಸ್ ನಷ್ಟಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 30 ವರ್ಷಗಳಲ್ಲಿ ಅಂದರೆ 1990-2020 ರ ಅವಧಿಯಲ್ಲಿ ಮಾರ್ಚ್ ತಿಂಗಳಲ್ಲಿ ಗರಿಷ್ಠ ತಾಪಮಾನ 30.9 ಡಿಗ್ರಿ ಸೆಲ್ಷಿಯಸ್ ನಷ್ಟಿದ್ದರೆ ಕನಿಷ್ಠ ತಾಪಮಾನ 17.6 ಡಿಗ್ರಿ ಯಷ್ಟು ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಕನಿಷ್ಠತಾಪಮಾನ 13 ಡಿಗ್ರಿ ಮತ್ತು ಗರಿಷ್ಠ ತಾಪಮಾನ 16.5 ಡಿಗ್ರಿ ಸೆಲ್ಷಿಯಸ್ ನಷ್ಟು ದಾಖಲಾಗಿದೆ.
ಬೆಂಗಳೂರಿನಲ್ಲಿ ಫೆಬ್ರವರಿ 17, 2005 ರಲ್ಲಿ ದಾಖಲಾಗಿತ್ತು. ಅಂದು 35.9 ಡಿಗ್ರಿ ಸೆಲ್ಷಿಯಷ್ ನಷ್ಟು ದಾಖಲಾಗಿತ್ತು. ಫೆ 6, 1884ರಲ್ಲಿ ಕೇವಲ 9.6 ಡಿಗ್ರಿ ಸೆಲ್ಷಿಯಷ್ ನಷ್ಟು ತಾಪಮಾನ ದಾಖಲಾಗಿತ್ತು. ಇದೊಂದು ದಾಖಲೆಯಾಗಿ ಉಳಿದಿದೆ. ಸಾಮಾನ್ಯವಾಗಿ ಬೇಸಿಗೆ ಶಿವರಾತ್ರಿ ನಂತರ ಆರಂಭವಾಗುತ್ತದೆ. ಚಳಿ ಶಿವಾಶಿವಾ ಎಂದು ಹೋಗುತ್ತದೆ ಎಂಬ ನಂಬಿಕೆ ಇದೆ. ಇದೆ ಪ್ರಕಾರ ಈ ವರ್ಷ ಶಿವರಾತ್ರಿ ಆಚರಿಸುವ ಫೆ.26 ರಂದು ಬೇಸಿಗೆ ಆರಂಭವಾಗಬೇಕಿತ್ತು.