ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕನನ್ನು ಬಂಧಿಸಿ ಆತನಿಂದ 40 ಕೋಟಿ ರೂ. ಮೌಲ್ಯದ 4 ಕೆಜಿ ಮಾದಕ ವಸ್ತು ಕೊಕೇನ್ ಅನ್ನು ಡಿಆರ್ ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜುಲೈ 18ರಂದು ದೋಹಾದಿಂದ ಬೆಂಗಳೂರಿಗೆ ಆಗಮಿಸಿದ ಭಾರತೀಯ ಪ್ರಜೆಯಿಂದ ಈ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈತನ ಬಳಿ ಸೂಪರ್ ಹೀರೊ ಕಾಮಿಕ್ಸ್ ಪುಸ್ತಕಗಳಿದ್ದವು. ಆದರೆ ಇವು ಭಾರವಾಗಿದ್ದು ಪರೀಕ್ಷೆಗೊಳಪಡಿಸಿದಾಗ ಇವುಗಳ ಕವರ್ ಪೇಜ್ ನಲ್ಲಿ ಡ್ರಗ್ಸ್ ಅನ್ನು ಅಡಗಿಸಿ ಇಡಲಾಗಿತ್ತು.
ಪ್ರಕರಣ ಸಂಬಂಧ ಡಿಆರ್ಐ ಅಧಿಕಾರಿಗಳು ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಯಾಣಿಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.