ಮದ್ಯ ಪ್ರಿಯರಿಗೆ ಶಾಕ್; ಇಂದಿನಿಂದ ಬಿಯರ್‌ ಬೆಲೆ ಹೆಚ್ಚಳ!

Most read

ಬೆಂಗಳೂರು: ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು ಬಿಯರ್ ದರದಲ್ಲಿ ಏಕಾಏಕಿ ಹೆಚ್ಚಳ ಮಾಡಿ ಆದೇಶ  ಹೊರಡಿಸಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಲಿದ್ದು, ಬಿಯರ್ ಪ್ರಿಯರು ಕಡಿಮೆ ಕುಡಿಯಬೇಕಾದ ಪರಿಸ್ಥಿತಿ ಉಂಟಾಗಿದೆ. 6 ತಿಂಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ದರಿಂದ ಬಿಯರ್ ಬೆಲೆ  ಹೆಚ್ಚಳವಾಗಿತ್ತು. ಈ ಬಾರಿ ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿದೆ. ಇದರಿಂದ ಬಿಯರ್ ಬೆಲೆ 10 ರೂ.ನಿಂದ 45 ರೂಪಾಯಿವರೆಗೂ ಬೆಲೆ ಏರಿಕೆಯಾಗಲಿದೆ.

More articles

Latest article