ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಏರಿಕೆಯಾಯಿತು ಬೀಫ್ ರಫ್ತು: ಎರಡನೇ ಸ್ಥಾನಕ್ಕೇರಿದ ಭಾರತ

Most read

ಕಳೆದ 24 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರವಧಿಯಲ್ಲಿಯೇ ಅತೀ ಹೆಚ್ಚು ಬೀಫ್ ರಫ್ತು ಪ್ರಮಾಣ ಏರಿಕೆಯಾಗಿದೆ. 2023ರಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರ ಭಾರತ ಎಂಬುದು ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟ್ನೆಸ್ ನಡೆಸಿರುವ ತನಿಖೆಯಲ್ಲಿ ತಿಳಿದುಬಂದಿದೆ.

ದೇಶದಲ್ಲಿ ಗೋವುಗಳ ರಕ್ಷಣೆಗೆ ಗೋ ಹತ್ಯೆ ನಿಷೇಧ ಕಾಯ್ದೆ. ಕಸಾಯಿ ಖಾನೆಗಳನ್ನು ಮುಚ್ಚಿಸಬೇಕು ಎನ್ನುವ ಕೂಗು ಹಿಂದೂ ಸಂಘಟನೆಗಳು ಆಗರಹಿಸುತ್ತಲೇ ಬಂದಿದ್ದಾರೆ. ಈ ಮಧ್ಯೆ ಸಂಘ ಪರಿವಾರದ ಸಂಘಟನೆಗಳಿಗೆ ಆಘಾತ ನೀಡುವಂತಹ ವರದಿ ಈಗ ಬಿಡುಗಡೆಯಾಗಿದೆ. ಹೌದು, ಸಂಘ ಪರಿವಾರದ ಹಾಟ್ ಪೇವರೇಟ್ ಬಿಜೆಪಿ ಸರ್ಕಾರದ ಅವಧಿಯಲ್ಲೇ ಬೀಫ್ ರಫ್ತು ಹೆಚ್ಚಳವಾಗಿದೆ. ಬೀಫ್ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ ದೊರೆತಿದೆ.

ವಿಶ್ವದ ನಾನಾ ರಾಷ್ಟ್ರಗಳು ಗೋಮಾಂಸವನ್ನು ರಫ್ತು ಮಾಡುತ್ತವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. 2023ರ ಅವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್​ ಮೊದಲ ಸ್ಥಾನ ಪಡೆದುಕೊಂಡರೆ, ಭಾರತಕ್ಕೆ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಯುಎಸ್ ಇದ್ದರೆ ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ.

2023ರ ಎಪ್ರಿಲ್ ವರೆಗೆ ಭಾರತವು 14.75 ಲಕ್ಷ ಟನ್ ಗಳಷ್ಟು ಗೋಮಾಂಸ ರಫ್ತು ಮಾಡಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿ ಇದ್ದರೆ. ಬ್ರೆಝಿಲ್ 2023ರ ಎಪ್ರಿಲ್ ವೇಳೆಗೆ 30 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿ ಮೊದಲನೇ ಸ್ಥಾನದಲ್ಲಿದೆ. 14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14 ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ.

ಪರಿಸರ ಮತ್ತು ಮಾನವ ಹಕ್ಕು ಗುಂಪಾದ ಗ್ಲೋಬಲ್ ವಿಟೈಸ್ ನಡೆಸಿರುವ ತನಿಖೆಯ ಪ್ರಕಾರ, ಬ್ರೆಝಿಲ್ ನ ಸೆರಾಡೊ ಪ್ರಸ್ಥ ಭೂಮಿಯಲ್ಲಿನ ಅಕ್ರಮ ಅರಣ್ಯ ನಾಶದೊಂದಿಗೆ ವಿಶ್ವದ ಮೂರು ಪ್ರಮುಖ ಬೀಫ್ ಉತ್ಪಾದನಾ ಸಂಸ್ಥೆಗಳಾದ ಜೆಬಿಎಸ್, ಮಿನರ್ವ ಹಾಗೂ ಮಾರ್ಫಿಗ್ ಸಂಸ್ಥೆಗಳು ಸಂಬಂಧ ಹೊಂದಿವೆ ಎಂಬ ತನಿಖಾ ವರದಿಯಲ್ಲಿ ಬಯಲಾಗಿತ್ತು. ಆದರೆ, ಆ ಎಲ್ಲ ಸಂಸ್ಥೆಗಳೂ ಈ ಎಲ್ಲಾ ಅಕ್ರಮದ ಆರೋಪವನ್ನು ಅಲ್ಲಗಳೆದಿದ್ದವು.

ಸೆರಾಡೊದ ಸಣ್ಣ ಪ್ರಮಾಣದ ವಿಸ್ತರಣೆಯಾದ ಮ್ಯಾಟೊ ಗ್ರಾಸೊ ಸ್ಥಿತಿಯ ಬಗ್ಗೆ ಈ ತನಿಖೆಯು ಗಮನ
ಕೊಟ್ಟಿತ್ತು. ಈ ಮೂರು ಸಂಸ್ಥೆಗಳ ಒಡೆತನದ ಜಾನುವಾರುಗಳಿಗಾಗಿ ನಡೆದಿದ್ದ ಅರಣ್ಯ ನಾಶದ ಸಂದರ್ಭದಲ್ಲಿ ಮರಗಳನ್ನು ಕಡಿಯಲು ಯಾವುದೇ ಅನುಮತಿ (ಪರವಾನಗಿ) ತೆಗೆದುಕೊಂಡಿರಲಿಲ್ಲ. ಅಕ್ರಮವಾಗಿ ಇದೆಲ್ಲವೂ ನಡೆದಿದೆ ಎಂಬುದು ಈ ತನಿಖೆಯಲ್ಲಿ ಪತ್ತೆಯಾಗಿತ್ತು.

ಕಿರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಡಿಸೆಂಬರ್ 30, 2024ರಿಂದ ಜೂನ್ 30, 2025ರವರೆಗೆ ಯೂರೋಪ್ ಒಕ್ಕೂಟದಲ್ಲಿ ಜಾರಿಯಾಗಿರುವ ಯೂರೋಪ್ ಒಕ್ಕೂಟ ಅರಣ್ಯ ನಾಶ ನಿಯಮಗಳು ಕಾನೂನನ್ನು ಪಾಲಿಸುವಂತೆ ಬೀಫ್ ಉತ್ಪಾದನಾ ಸಂಸ್ಥೆಗಳಿಗೆ ನೀಡಿರುವ ಗಡುವಿನ ಬೆನ್ನಿಗೇ ಈ ಸುದ್ದಿಯು ಬಂದಿದೆ.

2014- 15ರಲ್ಲಿ ಬೀಫ್ ರಫ್ತು 14,75,540 ಮೆಟ್ರಿಕ್ ಟನ್ ಆಗಿದೆ.10 ವರ್ಷಗಳ ಪೈಕಿ ಅತೀ ಹೆಚ್ಚು ಪ್ರಮಾಣದಲ್ಲಿ ಬೀಫ್ ರಪ್ತು ಆದವರ್ಷ ಇದಾಗಿದೆ. 2013- 14ರಲ್ಲಿ ರಫ್ತು ಪ್ರಮಾಣ 13,65,643 ಮೆಟ್ರಿಕ್ ಟನ್ ಆಗಿತ್ತು.2015- 16ರಲ್ಲಿ ಶೇ. 11 ಕುಸಿತ ಕಂಡು ಬಂತು. ಅಂದರೆ ಆ ವರ್ಷ ರಫ್ತು ಆಗಿದ್ದು 13,14,161 ಮೆಟ್ರಿಕ್ ಟನ್.

2016-17ರಲ್ಲಿ ಬೀಫ್ ರಫ್ತು 13,30,013 ಮೆಟ್ರಿಕ್ ಟನ್ ಆಗಿತ್ತು.ಅಂದರೆ 2015-16ಕ್ಕಿಂತ ಶೇ. 1.2 ಏರಿಕೆಯಾಗಿದೆ.

2017-18ರಲ್ಲಿ ಮತ್ತೆ ಅದು 13,48,225 ಮೆಟ್ರಿಕ್ ಟನ್‍ಗೆ ಏರಿಕೆಯಾಯಿತು. ಅಂದರೆ 2016- 17ರಲ್ಲಿ ರಫ್ತಾಗಿರುವುದಕ್ಕಿಂತ ಶೇ.1.3 ಏರಿಕೆಯಾಗಿತ್ತು.

ಕೋವಿಡ್ ಕಾರಣಗಳಿಂದಾಗಿ ಬೀಫ್ ರಫ್ತನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾದರೂ 13 ಮೆಟ್ರಿಕ್ ಟನ್ ಗಿಂತ ಕಡಿಮೆ ಆಗದೇ ಇರುವುದನ್ನು ನಾವು ಕಾಣಬಹುದು.

ಭಾರತವು 2022ರಲ್ಲಿ 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು.

More articles

Latest article